ಶ್ರೀ ಧ.ಗ್ರಾ ಯೋಜನೆಯಿಂದ ಸ್ವಉದ್ಯೋಗ ಪ್ರೇರಣಾ ಕಾರ್ಯಾಗಾರ

Upayuktha
0


ಹುನಗುಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹುನಗುಂದ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಸ್ವಉದ್ಯೋಗ ಪ್ರೇರಣಾ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರುಡ್ಸೆಟ್    ಸಂಸ್ಥೆಯ ಉಪನ್ಯಾಸಕರಾದ ಜಗದೀಶ್ ಪೂಜಾರ್ ಅವರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಚಿತ್ತವಾಡಗಿಯ ಗೌರವ ಕಾರ್ಯದರ್ಶಿಗಳಾದ ಎಂ.ಎಸ್ ಮಠ & ವಿಜಯ ಮಾಂತೇಶ್ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಆಲೂರ್ & ಸಂಗಮೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶೇಖರಪ್ಪ ಬಾದವಾಡಗಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಗದೀಶ್ ಪೂಜಾರ ರವರು ಮಾತನಾಡಿ, ಸ್ವಸಹಾಯ ಸಂಘದ ಸದಸ್ಯರು ಸ್ವಾವಲಂಬಗಿಗಳಾಗಬೇಕು ರುಡ್ಸೆಟ್ ಸಂಸ್ಥೆಯಿಂದ ಯೋಜನೆಯ ಸದಸ್ಯರಿಗೆ 26 ವಿಷಯಗಳ ಬಗ್ಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಸ್ತಾವಿಕವನ್ನು ಮೇಲ್ವಿಚಾರಕರಾದ ಅರುಣ್ ಕುಮಾರ್ ಮಠಪತಿ ಅವರು ಮಾತನಾಡಿ ಸ್ವಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಸದೃಢರಾಗಬೇಕೆಂದರೆ ಸ್ವಉದ್ಯೋಗ ಮಾಡಬೇಕು ಎಂದು ತಿಳಿಸಿದರು.


ಕಾರ್ಯಕ್ರಮದ ನಿರೂಪಣೆ ಶಿವಲಿಂಗಮ್ಮ ನಿರೂಪಿಸಿ ಸೇವಾ ಪ್ರತಿನಿಧಿ ನಿರ್ಮಲ ವಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಗೀತಾ ಕರಡಿ, ನಂದಿನಿ ಪಾಟೀಲ್, ನೂರಜಾನ ಇಟಗಿ, ಬಸಮ್ಮ ಬಾದವಾಡಗಿ, ದೇವಮ್ಮ ಪಾಟೀಲ್, ಸುಜಾತ ಪಾರಿವಾಳ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top