ಹೊಸ ಜ್ಞಾನದ ಹುಡುಕಾಟವೇ ಸಂಶೋಧನೆ: ಡಾ.ನೀತಾ ಕಾಮತ್

Upayuktha
0



ಮಂಗಳೂರು: ಇತ್ತೀಚೆಗೆ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಕೊಂಕಣಿ ಅಧ್ಯಯನ ಪೀಠ ಹಾಗೂ ಅರ್ಥಶಾಸ್ತ್ರ, ಇತಿಹಾಸ ಹಾಗೂ ಪುರಾತತ್ವ ಶಾಸ್ತ್ರ ಮತ್ತು ಹಿಂದಿ ಸ್ನಾತಕೋತರ ವಿಭಾಗಗಳ ಜಂಟಿ ಆಶ್ರಯದಲ್ಲಿ ಸಂಶೋಧನಾ ವಿಧಾನ ಕಾರ್ಯಗಾರ ಆಯೋಜಿಸಲಾಗಿತ್ತು. 




ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ  ನಿಟ್ಟೆ ಉಷಾ ಇನ್ಸ್ಟಿಟ್ಯೂಟ್  ಆಫ್ ನರ್ಸಿಂಗ್ ಸಾಯನ್ಸ್ ನ ಕಮ್ಯುನಿಟಿ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ನೀತಾ ಕಾಮತ್ ಅವರು ಮಾತನಾಡಿ, ನೂತನ ಜ್ಞಾನದ ಹುಡುಕಾಟವೇ ಸಂಶೋಧನೆ ಎಂದರು. ಕಾರ್ಯಕ್ರಮದ ಇತರ ಸಂಪನ್ಮೂಲ ವ್ಯಕ್ತಿಗಳಾದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತರ ವಾಣಿಜ್ಯ ವಿಭಾಗದ ಸಂಯೋಜಕ ಡಾ ಅಬ್ಬೋಕರ ಸಿದ್ದೀಕ್ ಹಾಗೂ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕ ಡಾ ದೇವದಾಸ್ ಪೈ ಅವರು ಸಂಶೋಧನಾ ವಿಧಾನದ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು. 




ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಡಾ ಲತಾ ಪಂಡಿತ್, ಸಂಶೋಧನಾ ವಿಧಾನದ ಮಹತ್ವದ ಕುರಿತು ತಿಳಿಹೇಳಿದರು. ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ ಜಯವಂತ ನಾಯಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಸ್ನಾಪಕೋತರ ವಿಭಾಗದ ಸಂಯೋಜಕ ಡಾ. ರಾಮಕೃಷ್ಣ ಬಿ ಎಂ, ಹಿಂದಿ ಸ್ನಾತಕೋತರ ವಿಭಾಗದ ಸಂಯೋಜಕಿ ಡಾ.  ನಾಗರತ್ನ ರಾವ್ ಉಪಸ್ಥಿತರಿದ್ದರು. ಇತಿಹಾಸ ಮತ್ತು ಪುರಾತತ್ವ ಸ್ನಾತಕೋತರ ವಿಭಾಗದ ಸಂಯೋಜಕಿ ಡಾ. ಮೀನಾಕ್ಷಿ ಎಮ್. ಎಮ್ ಅವರು ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  





Post a Comment

0 Comments
Post a Comment (0)
Advt Slider:
To Top