ಸಂಶೋಧನೆ ಒಂದು ತಾರ್ಕಿಕ ಚಿಂತನೆ: ಡಾ. ನೀತಾ ಕಾಮತ್

Upayuktha
0



ಮಂಗಳೂರು: ಯಾವುದೇ ನಿರ್ದಿಷ್ಟವಾದ ವಿಚಾರಗಳ ಜ್ಞಾನ ಸಂಪಾದನೆಗೆ ಸಂಶೋಧನೆ ಕೈಗೊಳ್ಳುವ ಜೊತೆಗೆ ಸಂಶೋಧನಾ ವಿಧಾನವೂ ಅಗತ್ಯ. ಒಟ್ಟಾರೆಯಾಗಿ ಸಂಶೋಧನೆ ಒಂದು ತಾರ್ಕಿಕ ಚಿಂತನೆ ಎಂದು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ. ನೀತಾ ಕಾಮತ್ ಅಭಿಪ್ರಾಯಪಟ್ಟರು. 




ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗ ಹಾಗೂ ಸ್ನಾತಕೋತ್ತರ ಹಿಂದಿ ವಿಭಾಗ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ 'ಸಂಶೋಧನಾ ವಿಧಾನʼ ವಿಷಯದ ಕುರಿತು ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದರು. 



ವರದಿಯ ಆಧಾರದ ಮೇಲೆ ಸಂಶೋಧನೆಯ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ ಎಂದು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಅಬ್ಬೋಕರ್ ಸಿದ್ದಿಕ್ ಹೇಳಿದರು. ಸಂಶೋಧನೆಯಲ್ಲಿ ಭಾಷೆಯ ಪ್ರಾಮುಖ್ಯತೆ ಮತ್ತು ಸೃಜನಾತ್ಮಕ ಭಾಷಾಂತರ, ಸಂಶೋಧನಾ ಬರವಣಿಗೆ ಕುರಿತು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ದೇವದಾಸ್ ಪೈ ಬಿ. ತಿಳಿಸಿದರು.



ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ಯಾರಾದರೂ ಪ್ರಶ್ನೆ ಕೇಳಿದರೆ ಅದನ್ನು ಸೂಕ್ತಿ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದ ಹೊರತು; ಅವರ ಪ್ರಶ್ನೆಗೂ ನಮ್ಮ ಉತ್ತರಕ್ಕೂ ಅರ್ಥಾತ್ ಸಂಬಂಧವೇ ಇಲ್ಲದಂತಾಗುತ್ತದೆ ಪ್ರಶ್ನೆ ಕೇಳುವುದು ಸಂಶೋಧಕನ ಮುಖ್ಯ ಲಕ್ಷಣ ಎಂದರು. 



ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಚಾಲಕ ಹಾಗೂ ಪ್ರಾಧ್ಯಾಪಕ ಡಾ. ರಾಮಕೃಷ್ಣ ಬಿ. ಎಂ., ಸ್ನಾತಕೋತ್ತರ ಪುರಾತತ್ವ್ತ ಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಂಚಾಲಕಿ ಡಾ. ಮೀನಾಕ್ಷಿ ಎಂ. ಎಂ., ಸ್ನಾತಕೋತ್ತರ ಹಿಂದಿ ವಿಭಾಗದ ಸಂಚಾಲಕಿ ನಾಗರತ್ನ ಎನ್. ರಾವ್ ಹಾಗೂ ಮಂಗಳೂರು ವಿಶ್ವದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಂಚಾಲಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯವಂತ ನಾಯಕ್ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top