ಮಂಗಳೂರು: ಭಾರತದ ಪ್ರಮುಖ ಬಿಸ್ಕತ್ತು ಮತ್ತು ಬೇಕರಿ ಬ್ರಾಂಡ್‍ಗಳಲ್ಲಿ ಒಂದಾದ ಬಿಸ್ಕ್ ಫಾರ್ಮ್ ಇಂದು ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರನ್ನು ಬ್ರಾಂಡ್ ಅಂಬಾಸಿಡರ್(ರಾಯಭಾರಿ) ಆಗಿ ಆಯ್ಕೆ ಮಾಡಿರುವುದನ್ನು ಪ್ರಕಟಿಸಿದೆ.
ಬಹುಮುಖ ಪ್ರತಿಭೆಯ, ಪ್ರಶಸ್ತಿ ವಿಜೇತ ನಟಿ, ಚಹಾ ಸಮಯದ ಉತ್ತಮ ಸಂಗಾತಿಯಾಗಬಲ್ಲ ರುಚಿಕರವಾದ, 4 ಬಗೆಯ ಟೋಸ್ಟ್(ರಸ್ಕ್) ಒದಗಿಸುವ 'ರಸ್ಕಿಟ್ ಬ್ರ್ಯಾಂಡ್'ನ ರಾಯಭಾರಿಯಾಗಲಿದ್ದಾರೆ. ತನ್ನ ನಾವೀನ್ಯತೆ, ಗುಣಮಟ್ಟ ಮತ್ತು ಸುವಾಸನೆಗೆ ಹೆಸರುವಾಸಿಯಾದ ಬಿಸ್ಕ್ ಫಾರ್ಮ್, ಇದೀಗ ಬ್ರ್ಯಾಂಡ್ ರಶ್ಮಿಕಾ ಮಂದಣ್ಣ ರಾಯಭಾರಿತ್ವದಲ್ಲಿ ಮಾರುಕಟ್ಟೆಯಲ್ಲಿ ಭಾರಿ ಗಮನ ಸೆಳೆಯಲು ಮತ್ತು ಭಾರತದಾದ್ಯಂತ ಮನೆಮಾತಾಗಲು ಸಜ್ಜಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿಜಯ್ ಸಿಂಗ್ ಹೇಳಿದ್ದಾರೆ.
ಬಿಸ್ಕ್ ಫಾರ್ಮ್‍ನ ರುಚಿಕರವಾದ ಮತ್ತು ಆರೋಗ್ಯಕರ ಉತ್ಪನ್ನಗಳ ಮೂಲಕ ನನ್ನ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಅವರನ್ನು ಹೊಂದಿದ ಹೊಸ ಪ್ರಚಾರ ಅಭಿಯಾನವನ್ನೂ ಬಿಸ್ಕ್ ಫಾರ್ಮ್ ಹಮ್ಮಿಕೊಂಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ