ದೀಪಿಕಾ ಪಡುಕೋಣೆ ಟೆಕ್ನೋ ರಾಯಭಾರಿ

Upayuktha
0




ಮಂಗಳೂರು: ಪ್ರೀಮಿಯಂ ಜಾಗತಿಕ ಸ್ಮಾರ್ಟ್‍ಫೋನ್ ಬ್ರ್ಯಾಂಡ್ ಆಗಿರುವ ಟೆಕ್ನೋ, ಭಾರತದ ಸೂಪರ್‍ಸ್ಟಾರ್ ದೀಪಿಕಾ ಪಡುಕೋಣೆ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ.




ಇದು ಗ್ರಾಹಕರ ಅಗತ್ಯತೆಗಳನ್ನು ಕೇಂದ್ರವಾಗಿ ಹೊಂದಿರುವ ಸೊಗಸಾದ ಮತ್ತು ಕೈಗೆಟುಕುವ ಅತ್ಯುತ್ತಮ ಅನುಶೋಧನೆಗಳನ್ನು ತಲುಪಿಸುವ ಟೆಕ್ನೋ ಪ್ರತಿಪಾದನೆಯ ಮುಂದಿನ ಹಂತದ ಪ್ರತೀಕವಾಗಿದೆ ಎಂದು ಟೆಕ್ನೋ ಮೊಬೈಲ್‍ನ ಸಿಇಓ ಆರ್ಜೀತ್ ತಲಪಾತ್ರ ಹೇಳಿದ್ದಾರೆ.




"ನಾವೀನ್ಯತೆ ಮತ್ತು ಸೊಗಸಾದ ಸ್ಮಾರ್ಟ್‍ಫೋನ್‍ಗಳಿಗೆ ಸಮಾನಾರ್ಥಕವಾದ ಟೆಕ್ನೋ ಬ್ರಾಂಡ್‍ಗೆ ಸೇರಲು ನಾನು ಉತ್ಸುಕಳಾಗಿದ್ದೇನೆ. ಜೀವನಶೈಲಿಗೆ ಅನುಸಾರವಾದ ಟೆಕ್ನೋ ವಿಧಾನವು ನಾವೀನ್ಯತೆ, ಶೈಲಿ, ವಿನ್ಯಾಸ ಮತ್ತು ಲಭ್ಯತೆಯನ್ನು ಸುಲಲಿತವಾಗಿ ಸಂಯೋಜಿಸುತ್ತದೆ, ಹೊಸ ಪೀಳಿಗೆಯ ಉತ್ಸಾಹದೊಂದಿಗೆ ಅನುರಣಿಸುತ್ತದೆ" ಎಂದು ದೀಪಿಕಾ ಬಣ್ಣಿಸಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗ್ರಾಹಕರನ್ನು ಸಶಕ್ತಗೊಳಿಸಲು ದೀಪಿಕಾ ಮತ್ತು ಟೆಕ್ನೋ ಜತೆಯಾಗಿದ್ದು, ಈ ಸಹಯೋಗವು ಟೆಕ್ನೋದ ತಾಂತ್ರಿಕ ಕ್ಷೇತ್ರಕ್ಕೆ ಸೊಬಗು, ಬುದ್ಧಿವಂತಿಕೆ ಮತ್ತು ಬಹುತ್ವದ ಸ್ಪರ್ಶವನ್ನು ನೀಡಲಿದೆ. ಬ್ರಾಂಡ್ ರಾಯಭಾರಿಯಾಗಿ ದೀಪಿಕಾ, ಎಲ್ಲೆಡೆ ಟೆಕ್ನೋವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ನವೀನ ಹಾಗೂ ಸೊಗಸಾದ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಅವರ ದೃಷ್ಟಿಯನ್ನು ಬಲಪಡಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





Post a Comment

0 Comments
Post a Comment (0)
Advt Slider:
To Top