ಯುನಿವರ್ಸಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ

Upayuktha
0


ಬೆಂಗಳೂರು: ದಕ್ಷಿಣ ಕನ್ನಡಿಗರ ಸಂಘ ಬೆಂಗಳೂರು ವತಿಯಿಂದ ಕರಾವಳಿ ರತ್ನ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಸಂಜೆ ಎಂಜಿ ರಸ್ತೆಯ ಹೋಟೆಲ್ ಅಜಂತಾದ ರೋಹಿಣಿ ಸಭಾಂಗಣದಲ್ಲಿ ನಡೆಯಿತು.


ಯುನಿವರ್ಸಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿ, ಸೋನಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕೆ. ಯಜ್ಞನಾರಾಯಣ ಕಮ್ಮಾಜೆ ಮತ್ತು ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷರಾದ ಹಿರಿಯ ಲೆಕ್ಕ ಪರಿಶೋಧಕ ಗೌತಮ್ ಹೆಚ್.ವಿ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕರಾವಳಿ ರತ್ನ ವಿಶೇಷ ಪ್ರಶಸ್ತಿಯನ್ನು ಚಂದ್ರಯಾನ-3ರಲ್ಲಿ ಭಾಗಿಯಾದ ಹಿರಿಯ ಎಂಜಿನಿಯರ್‌ ಪ್ರೊ. ಗಣೇಶ ಉಡುಪ ಅವರಿಗೆ ನೀಡಿ ಗೌರವಿಸಲಾಯಿತು.


ಸಮಾರಂಭವನ್ನು ಬೆಂಗಳೂರು ದೂರದರ್ಶನದ ಸಹಾಯಕ ನಿರ್ದೇಶಕಿ ಡಾ. ನಿರ್ಮಲಾ ಸಿ. ಯಲಿಗಾರ್ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕ್ ಉಪ ಮಹಾ ಪ್ರಬಂಧಕ ನಾಗರಾಜ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಿದ್ದರು.


ಸೆಂಚುರಿ ಗ್ರೂಪ್ಸ್ ಮುಖ್ಯಸ್ಥರಾದ ಡಾ. ಪಿ. ದಯಾನಂದ ಪೈ, ಎಂಆರ್‌ಜಿ ಗ್ರೂಪ್ಸ್ ಮುಖ್ಯಸ್ಥರಾದ ಕೆ. ಪ್ರಕಾಶ್ ಶೆಟ್ಟಿ ಹಾಗೂ ವಿಧಾನ ಪರಿಷತ್ ಶಾಸಕ ಯು.ಬಿ ವೆಂಕಟೇಶ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ದ.ಕ ಸಂಘದ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯರು ಸಭಾಧ್ಯಕ್ಷತೆ ವಹಿಸಿದ್ದರು.


2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.


ಶ್ರೀದೇವಿ ಯಕ್ಷಕಲಾ ಸಂಘ ಬೆಂಗಳೂರು ಇವರಿಂದ 'ಸುದರ್ಶನ ಗರ್ವಭಂಗ' ಯಕ್ಷಗಾನ ಪ್ರದರ್ಶನವಿತ್ತು. ರಾಧಿಕ ಕಲ್ಲೂರಾಯ ಅವರಿಂದ ನೃತ್ಯವೈಭವ ಹಾಗೂ ರಾಜೀವ್ ಬೀಜಾಡಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.


ದ.ಕ ಸಂಘದ ಉಪಾಧ್ಯಕ್ಷರಾದ ಪಿ.ಎಸ್ ಬಾಗಿಲ್ತಾಯ ಮತ್ತು ಡಾ.ಕೆ.ಸಿ ಬಲ್ಲಾಳ್‌ ಹಾಗೂ ಕಾರ್ಯದರ್ಶಿ ವೈ ಜಯಂತರಾವ್ ಒಟ್ಟಾರೆ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top