8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ- ಒಂಟಿ ಸಲಗದ ಜತೆ ಕಾಳಗದಲ್ಲಿ ಮೃತ್ಯುವಶ

Upayuktha
0



ಹಾಸನ: ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕಾಡಾನೆಯೊಂದಿಗಿನ ಕಾಳಗದಲ್ಲಿ ದುರಂತ ಸಾವನ್ನಪ್ಪಿದೆ. ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು.


ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿಮ ಯಸಳೂರು ಎಂಬಲ್ಲಿ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಾನೆ ಅರ್ಜುನನ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಆಗ ತೀವ್ರವಾಗಿ ಘಾಸಿಗೊಂಡ ಅರ್ಜುನ ಮೃತಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಕಾರ್ಯಾಚರಣೆ ಸಂದರ್ಭದಲ್ಲಿ ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಇತರ ಮೂರು ಸಾಕಾನೆಗಳು ಪಲಾಯನ ಮಾಡಿವೆ. ಆದರೆ ಅರ್ಜುನ ಮಾತ್ರ ಒಂಟಿಯಾಗಿ ನಿಂತು ಹೋರಾಟ ನಡೆಸಿದೆ. ಕಾಳಗ ಆರಂಭವಾಗುತ್ತಿದ್ದಂತೆ ಮಾವುತ ಅರ್ಜುನನ ಮೇಲಿನಿಂದ ಇಳಿದು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಅರ್ಜುನ ಆನೆ ಮೃತಪಟ್ಟಿದೆ.


ಚಿತ್ರ ಕೃಪೆ: ದಿ ಹಿಂದೂ


ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


ಅರ್ಜುನ ಆನೆಯನ್ನು 1968ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಖೆಡ್ಡಾಗೆ ಬೀಳಿಸಿ ಸೆರೆಹಿಡಿಯಲಾಗಿತ್ತು. ಅದು ಪಳಗಿದ ನಂತರ 1990ರ ದಶಕದಲ್ಲಿ ಮೈಸೂರು ದಸರಾ ಮೆರವಣಿಗೆಯ ಆನೆಗಳ ಗುಂಪಿಗೆ ಸೇರಿಸಿಕೊಳ್ಳಲಾಯಿತು. ದ್ರೋಣ ಮತ್ತು ಬಲರಾಮ ಎಂಬ ಅಂಬಾರಿ ಹೊರುವ ಆನೆಗಳು ಅನಾರೋಗ್ಯಕ್ಕೆ ಒಳಗಾದ ಬಳಿಕ ಅರ್ಜುನನಿಗೆ ಅಂಬಾರಿ ಹೊರುವ ಹೊಣೆ ವಹಿಸಲಾಗಿತ್ತು.


ಮಾಜಿ ಸಿಎಂ ಎಚ್‌ಡಿಕೆ ಸಂತಾಪ:

ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ಮೃತಪಟ್ಟ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ. ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಅವರು ಹಾಕಿರುವ ಪೋಸ್ಟ್‌ ಇಲ್ಲಿದೆ.





ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top