ರಸಪ್ರಶ್ನೆ ಸ್ಪರ್ಧೆ: ಕಾಟಿಪಳ್ಳ ಸರ್ಕಾರಿ ಶಾಲೆಗೆ ಪ್ರಶಸ್ತಿ

Upayuktha
0




ಮಂಗಳೂರು: ಸಂಶೋಧನೆ, ಅಭಿವೃದ್ಧಿ ಮತ್ತು ತಯಾರಿಕಾ ಸೇವೆಗಳ ಪ್ರಮುಖ ಸಂಸ್ಥೆಯಾಗಿರುವ ಸಿಂಜೇನ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಆಯೋಜಿಸಿದ್ದ ಎರಡನೇ ವಾರ್ಷಿಕ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ 'ಸಿಂಕ್ವಿಜಿಟಿವ್'ನಲ್ಲಿ ಕಾಟಿಪಳ್ಳ ಜಿಲ್ಲಾ ಪಂಚಾಯ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿ ಗೆದ್ದಿದೆ.



ಬೆಂಗಳೂರು ವಿಭಾಗದಲ್ಲಿ ಹಾರಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹ್ಯಾಪಿ ಕುಮಾರಿ, ನಿಖಿತಾ ಎ, ಲಿಖಿತಾ ಎಸ್ ಪ್ರಥಮ ಹಾಗೂ  ಮಂಗಳೂರು ವಿಭಾಗದಲ್ಲಿ ಕಾಟಿಪಳ್ಳ ಶಾಲೆಯ ಶರೂನ್ ಬಿಲಾಲ್ ಹಸನ್, ಗೋವಿಂದ ರಾಜ್, ಭಾರತಿ ಮುತ್ತಪ್ಪ ಅರಿ ಬಹುಮಾನ ಪಡೆದಿದ್ದಾರೆ. ದಕ್ಷಿಣ ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು, ಪ್ರೇರಣೆ ಮತ್ತು ಮಕ್ಕಳ ಪ್ರತಿಭೆ  ಗುರುತಿಸುವ ಗುರಿಯೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು.



ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಘೊಷಣಾ ಮಾರಂಭದಲ್ಲಿ, ಡಿಡಿಪಿಐ ಕಚೇರಿ ಸಹಾಯಕ ಕಾರ್ಯಕ್ರಮ ಸಂಯೋಜಕಿ ಶೋಭಾ, ಮಂಗಳೂರು ಡಯಟ್ ಹಿರಿಯ ಉಪನ್ಯಾಸಕಿ ಫಾತಿಮಾ ಅತಿಥಿಗಳಾಗಿದ್ದರು. ಸಿಂಜೆನ್ ಸಂಸ್ಥೆಯ ನರೇಂದ್ರ ಪ್ರಭು, ಗಣರಾಜ್ ಪಾವಲಕೋಡಿ, ಬಯೋಕಾನ್ ಪ್ರತಿಷ್ಠಾನದ ವಿಕ್ರಮ್ ಮತ್ತು ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಷನ್‍ನ ಎ.ಆರ್.ನಾಗೇಶ್ ಉಪಸ್ಥಿತರಿದ್ದರು.



ದಕ್ಷಿಣ ಕನ್ನಡದ 125 ಶಾಲೆಗಳಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮ ನಡೆದಿತ್ತು. ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಅಧ್ಯಯನ  ಮುಂದುವರಿಸಲು ಮತ್ತು ಭವಿಷ್ಯದಲ್ಲಿ ವೃತ್ತಿ ಮಾರ್ಗಗಳನ್ನು ಪರಿಗಣಿಸುವುದ್ದೇಶದಿಂದ ಹಮ್ಮಿಕೊಂಡ ರಸಪ್ರಶ್ನೆ ಕಾರ್ಯಕ್ರಮ ವಿಜ್ಞಾನದ ಬಗ್ಗೆ ಸಹಜ ಒಲವು ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿಯೂ ನಿರ್ಣಾಯಕ ಪಾತ್ರವನ್ನು ವಹಿಸಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top