ಎಕ್ಸ್‌ಕಾನ್ ಪ್ರದರ್ಶನದಲ್ಲಿ ವಿನೂತನ ಮಹೀಂದ್ರಾ ಉತ್ಪನ್ನ ಬಿಡುಗಡೆ

Upayuktha
0


ಮಂಗಳೂರು: ಮಹೀಂದ್ರಾದ ಟ್ರಕ್ ಮತ್ತು ಬಸ್ ವಿಭಾಗ ಹಾಗೂ ನಿರ್ಮಾಣ ಸಲಕರಣೆ ವಿಭಾಗ, ಬೆಂಗಳೂರಿನಲ್ಲಿ ನಡೆಯುತ್ತಿರುವ ಎಕ್ಸ್‌ಕಾನ್ 2023 ಪ್ರದರ್ಶನದಲ್ಲಿ ವಿನೂತನ ಉತ್ಪನ್ನಗಳನ್ನು ಪರಿಚಯಿಸಿವೆ.



ನಾವೀನ್ಯತೆ ಮತ್ತು ವಿಶ್ವಾಸಾರ್ಹತೆಯ "ನಯಾ ಇಂಡಿಯಾ ಕಾ ನಯಾ ಟಿಪ್ಪರ್" ಮಹೀಂದ್ರಾ ಬ್ಲೇಝೊ ಎಕ್ಸ್ ಎಂ- ಡುರಾ ಮತ್ತು ಹೊಸ ಸಿಇವಿ5 ಶ್ರೇಣಿಯ ನಿರ್ಮಾಣ ಸಲಕರಣೆಗಳು ತಮ್ಮ ವಿಭಾಗಗಳಲ್ಲಿ ಗುಣಮಟ್ಟವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿವೆ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‍ನ ವಾಣಿಜ್ಯ ವಾಹನಗಳ ವಹಿವಾಟು ಮುಖ್ಯಸ್ಥ ಜಲಜ್ ಗುಪ್ತಾ ಹೇಳಿದ್ದಾರೆ.



ಇದರ ಜತೆಗೆ ರೋಡ್‍ಮಾಸ್ಟರ್ ಮತ್ತು ಅರ್ಥ್‍ಮಾಸ್ಟರ್‌ನಂತಹ ಸಂಪೂರ್ಣ ಶ್ರೇಣಿಯ ಬಿಎಸ್‍ವಿ ನಿರ್ಮಾಣ ಸಾಧನಗಳು, ಹಾಗೆಯೇ  ಬ್ಲೇಝೊ ಎಕ್ಸ್ ಎಂ- ಡುರಾ 35 ಟಿಪ್ಪರ್, ಬ್ಲೇಝೊ ಎಕ್ಸ್ 28 ಟ್ರಾನ್ಸಿಟ್ ಮಿಕ್ಸರ್, ಫುರಿಯೊನಂತಹ ವ್ಯಾಪಕವಾದ ಟ್ರಕ್ ಶ್ರೇಣಿ ಉತ್ಪನ್ನಗಳೂ ಪ್ರದರ್ಶನಕ್ಕಿವೆ.


ಮಹೀಂದ್ರಾ ಸಾರಥಿ ಅಭಿಯಾನದಂತಹ ಗ್ರಾಹಕ ಕಲ್ಯಾಣ ಕಾರ್ಯಕ್ರಮಗಳು ಲಾರಿ ಚಾಲಕರ 1100 ಹೆಣ್ಣುಮಕ್ಕಳಿಗೆ ತಲಾ ರೂ 10,000 ಮೊತ್ತದ ವಿದ್ಯಾರ್ಥಿವೇತನವನ್ನು ನೇರ ಬ್ಯಾಂಕ್ ವರ್ಗಾವಣೆಯ ಮೂಲಕ ತಲುಪಿಸಲಾಗಿದೆ. ವಿದ್ಯಾರ್ಥಿನಿಯರ ಸಾಧನೆಯನ್ನು ಮನ್ನಿಸಿ ಪ್ರಮಾಣಪತ್ರವನ್ನು ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top