ಪುತ್ತೂರು: ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನ ಕೇಂದ್ರ, ಐಕ್ಯೂಎಸಿ, ದೇರಾಜೆ. ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದೇರಾಜೆ, ಸೀತಾರಾಮಯ್ಯ ನೆನಪು ನೂರೆಂಟು (ಸಂಸ್ಮರಣ ಗ್ರಂಥ) ಮತ್ತು ರಸಯಷಿ (ಮರುಮುದ್ರಣ) ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಡಿಸೆಂಬರ್ 12 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.
ಮುಂಜಾನೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಮೊದಲ ಅವಧಿಯಲ್ಲಿ ಕೃತಿಗಳ ಲೋಕಾರ್ಪಣೆ ನಡೆಯಲಿದ್ದು, ಇದನ್ನು ಚಿ೦ತಕ ಲಕ್ಷ್ಮೀಶ ತೋಲ್ಟಾಡಿ ನಡೆಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಮತ್ತು ಅರ್ಥಧಾರಿ ಗಣರಾಜ ಕುಂಬ್ಳೆ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪಯುಕ್ತ ಇ-ಪೇಪರ್ ಓದಲು ಕ್ಲಿಕ್ ಮಾಡಿ:
ನಂತರದ ಅವಧಿಯಲ್ಲಿ 'ದೇರಾಜೆ ಅರ್ಥ ವೈಭವ ಸ್ಮರಣೆ' ಎಂಬ ಕಾರ್ಯಕ್ರಮವನ್ನು ಲಕ್ಷ್ಮೀಶ ತೋಲ್ಟಾಡಿ ನಡೆಸಿಕೊಡಲಿದ್ದಾರೆ. ಮದ್ಯಾಹ್ನ ನಂತರದ ಅವಧಿಯಲ್ಲಿ "ಅಗ್ನಿಪರೀಕ್ಷೆ - ಶ್ರೀರಾಮ ಪಟ್ಟಾಭಿಷೇಕ" ತಾಳಮದ್ದಳೆ ಕಾರ್ಯಕ್ರಮ ಜರಗಲಿದೆ. ದಿನೇಶ್ ಅಮ್ಮಣ್ಣಾಯ ಭಾಗವತಿಕೆಯನ್ನು ಮಾಡಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ