ವಿಸಿಇಟಿ ಎಂಬಿಎ ವಿಭಾಗದ ವಿದ್ಯಾರ್ಥಿ ತಂಡಗಳಿಗೆ ಸ್ಟಾರ್ಟ್ ಅಪ್ ಚಾಲೆಂಜಸ್ ಸ್ಪರ್ಧೆಯಲ್ಲಿ ಬಹುಮಾನ

Upayuktha
0


ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿಗಳ ಎರಡು ತಂಡಗಳು ಸ್ಟಾರ್ಟ್ ಅಪ್ ಚಾಲೆಂಜಸ್ ಸ್ಪರ್ಧೆಯಲ್ಲಿ ತಲಾ ಒಂದು ಲಕ್ಷ ರೂಗಳ ನಗದು ಬಹುಮಾನವನ್ನು ಗೆದ್ದುಕೊಂಡಿವೆ. 


ಕೆಎಸ್‌ಡಿಸಿ ಕರ್ನಾಟಕ ಸರ್ಕಾರ, ಯುಎನ್‌ಡಿಪಿ, ಕೌಶಲ್ಯ ಕರ್ನಾಟಕ, ಸೆವೆನ್ತ್ ಸೆನ್ಸ್, ಎಸ್‌ಎಪಿ ಲ್ಯಾಬ್ಸ್ ಇಂಡಿಯಾ ಲಿಮಿಟೆಡ್, ಕೋಡ್ ಉನ್ನತಿ ಮತ್ತು ಎಜೆಐಇಟಿ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಮ್ಮ ಯೋಜನೆಯನ್ನು ಮಂಡಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.


ಸೌರ ಶಕ್ತಿ ಮತ್ತು ಇತರ ಇಂಧನ ವ್ಯವಸ್ಥೆಯನ್ನು ಒಳಗೊಂಡ ಡ್ಯುಯಲ್ ಟ್ಯೂನಿಂಗ್ ಇಂಜಿನ್‌ಗಳನ್ನು ಹೊಂದಿರುವ ದೋಣಿ, ಹಡಗು ಮತ್ತು ಕ್ರೂಸರ್‌ಗಳಲ್ಲಿ ಇಂಧನದ ಮಿತವ್ಯಯವನ್ನು ಸಾಧಿಸುವ ವಿನೂತನ ಕಲ್ಪನೆಯನ್ನು ಯೋಜನೆಯು ಒಳಗೊಂಡಿದೆ. ಕರಾವಳಿ ಭಾಗದ ಮೀನುಗಾರರಿಗೆ ಬಹಳಷ್ಟು ಪ್ರಯೋಜನಕಾರಿಯಾಗಬಲ್ಲ ಈ ಯೋಜನೆಯನ್ನು ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿಗಳಾದ ಪ್ರಜ್ಞೇಶ್.ಎನ್, ಸುಶಾಂತ್.ಎಚ್.ಪಿ, ಸ್ಪರ್ಶಿತ್.ಐ.ಶೆಟ್ಟಿ ಮತ್ತು ವಿಲಾಸ್ ಚೌಟಾ ಅಭಿವೃದ್ದಿಪಡಿಸಿದ್ದರು.


ದ್ವಿತೀಯ ತಂಡವು ಸೌರ ಶಕ್ತಿ ಮತ್ತು ಪವನ ಶಕ್ತಿಯ ದ್ವಿವಿದ್ಯುತ್ ಉತ್ಪಾಧನಾ ವಿಧಾನವನ್ನು ಅಭಿವೃದ್ದಿಪಡಿಸಿದ್ದು, ಸೌರ ಶಕ್ತಿ ಮತ್ತು ಪವನ ಶಕ್ತಿಯ ಮೂಲಕ ಟರ್ಬೆÊನ್‌ಗಳನ್ನು ಬಳಸಿಕೊಂಡು ಜಲಸಂಪನ್ಮೂಲಗಳ ಮೂಲಕ ವಿದ್ಯುತ್ ಉತ್ಪಾದಿಸುವುದು ಮತ್ತು ಮಳೆನೀರನ್ನು ಇಂಗಿಸುವ ಯೋಜನೆ ಇದಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರಿಗೆ ನಿರಂತರ ವಿದ್ಯುತ್ ಪೂರೈಕೆಯ ಜೊತೆಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಮಳೆನೀರು ಕೊಯಿಲಿನ ಮೂಲಕ ನೀರಿನ ಮಿತವ್ಯಯವನ್ನು ಸಾಧಿಸಬಹುದಾಗಿದೆ. ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿಗಳಾದ ನೀಕ್ಷಿತಾ ಶೆಟ್ಟಿ, ನೇಹಾ ಮತ್ತು ಸಂಭ್ರಮ್À ಅವರು ಈ ಯೋಜನಾ ವರದಿಯನ್ನು ಮಂಡಿಸಿದ್ದರು.


ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್.ಎಂ.ಶಿಂದೆ ಅವರ ಮಾರ್ಗದರ್ಶನದಲ್ಲಿ ಇದನ್ನು ತಯಾರಿಸಲಾಗಿತ್ತು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top