ನಾಳೆ ಸಂಜೆ ಪುತ್ತೂರಿನಲ್ಲಿ ಹೊಂಗಿರಣ ಕಲಾ ತಂಡದ ಗೊಂಬೆಯಾಟ ಪ್ರದರ್ಶನ

Upayuktha
0


ಪುತ್ತೂರು: ಡಿಸೆಂಬರ್ 2ರಂದು ಶನಿವಾರ ಸಂಜೆ 6 ಗಂಟೆಗೆ ಸರಿಯಾಗಿ ಹಳಿಯಾಳದ ಹೊಂಗಿರಣ ಗೊಂಬೆ ಆಟ ತಂಡದವರು ಸೌಗಂಧಿಕಾದಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ. ಹೊಂಗಿರಣ ಕಲಾತಂಡವು ಸುಮಾರು 15 ವರ್ಷಗಳಿಂದ ಗೊಂಬೆ ಆಟದ ಪ್ರದರ್ಶನಗಳನ್ನು ನೀಡುತ್ತಾ ಜನರ ಮನಸ್ಸನ್ನು ಸೋರೆಗೊಂಡಿದೆ. ದೇಶದ 23 ರಾಜ್ಯಗಳಲ್ಲಿ ಮಾತ್ರವಲ್ಲದೆ ನೇಪಾಳ ಮತ್ತು ಥೈಲ್ಯಾಂಡ್ ದೇಶದಲ್ಲಿ ಹೀಗೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರದರ್ಶನಗಳನ್ನು ನೀಡಿದೆ. ದೂರದರ್ಶನ ಚಂದನ, ಚಿಂಟು, ಬಸವ, ಕೆನರಾ, ಉದಯ, ಈಟಿವಿ ಹೀಗೆ ಹಲವು ವಾಹಿನಿಗಳಲ್ಲಿ ಇವರ ಗೊಂಬೆ ಕಥಾನಕಗಳು ಪ್ರಸಾರಗೊಂಡು ಜನ ಮೆಚ್ಚುಗೆ ಗಳಿಸಿದೆ.


ವಿಶ್ವ ಪ್ರಸಿದ್ಧ ಹಂಪಿ ಉತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ, ಉತ್ಸವದಲ್ಲಿ ಹೊರನಾಡು ಉತ್ಸವ, ಗಡಿನಾಡು ಉತ್ಸವ, ಕರಾವಳಿ ಉತ್ಸವ, ಕದಂಬೋತ್ಸವ, ಹೀಗೆ ನಾನಾ ಕಡೆ ಇವರ ತಂಡ ಪ್ರದರ್ಶನಗಳನ್ನು ನೀಡಿದೆ. ಹೊಂಗಿರಣ ಗೊಂಬೆ ಆಟ ತಂಡದಲ್ಲಿ ಸೂತ್ರದ ಗೊಂಬೆ ಆಟ, ಕೀಲು ಗೊಂಬೆ ಆಟ, ಕೈ ಗೊಂಬೆ ಆಟ, ಕಡ್ಡಿ ಗೊಂಬೆ, ಹೀಗೆ ಹಲವಾರು ಗೊಂಬೆಗಳ ಪ್ರದರ್ಶನ ಪ್ರಕಾರಗಳಿವೆ.


ರಾಮಾಯಣ, ಮಹಾಭಾರತದ, ಕಥೆಗಳನ್ನು ಐತಿಹಾಸಿಕ ಸಾಮಾಜಿಕ ಮತ್ತು ಕಾಲ್ಪನಿಕ ಕಥೆಗಳನ್ನು ಸುಮಾರು ಒಂದು ಗಂಟೆ ಕಾಲ  ಇವರು ಪ್ರದರ್ಶನ ನೀಡಲಿದ್ದಾರೆ. ಮಕ್ಕಳ ಮನಸ್ಸಿಗೆ ಹೆಚ್ಚು ಮನರಂಜನೆ ನೀಡಬಲ್ಲ ಕುತೂಹಲ ಮೂಡಿಸಬಲ್ಲ ಈ ಬೊಂಬೆ ಆಟಗಳನ್ನು ಮಕ್ಕಳು ನೋಡುವಂತೆ ಪ್ರೇರೇಪಿಸುವುದು ಕೂಡ ಅಗತ್ಯವಿದೆ. ಗೊಂಬೆಗಳ ರಚನೆ ಬಣ್ಣ ಕುಣಿತ ಹಿಮ್ಮೇಳನ ಇವುಗಳ ಬಗ್ಗೆ ಇನ್ನಷ್ಟು ಕುತೂಹಲವಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top