ಕವನ: ಯುಗಯುಗದ ನೀತಿ...!

Upayuktha
0


ಪಾಂಡವರು ಐವರಂತೆ

ಕೌರವರು ನೂರೊಂದಂತೆ

ಹೀಗೇಕೆ.? ಏಕೆ ಹೀಗೆ.?

ದುರ್ಜನರ ಬಲವಿರುವುದು

ದುರ್ದಾನ ಧನಬಲವಿರುವುದು

ಸದಾ ಅಸತ್ಯದ ಕಡೆಗೆ, 

ನಿತ್ಯವೂ ಅಧರ್ಮದೆಡೆಗೆ.!


ಸತ್ಯಾಸತ್ಯಗಳ ಪರೀಕ್ಷಿಸದೆ

ಧರ್ಮಾಧರ್ಮಗಳ ಈಕ್ಷಿಸದೆ 

ಜನ ಕೂಡ ನಿಂತುಬಿಡುವುದು

ಜೈ ಜೈ ಎಂದು ಬಿಡುವುದು

ಹೆಚ್ಚಿನ ಸಂಖ್ಯೆಯಿರುವೆಡೆಗೆ 

ಬಹುಜನ ಸಂಖ್ಯೆಯೆಡೆಗೆ

ಇದುವೆ ಈ ಲೋಕದಾ ಬಗೆ.!


ಜನಬಲ ಅಸಂಖ್ಯವಿದ್ದರೂ

ಅಕ್ಷೋಹಿಣಿ ಸೈನ್ಯವಿದ್ದರೂ

ಧನಬಲ ಅಗಣಿತವಿದ್ದರೂ

ನೂರವರಲ್ಲ ಗೆದ್ದಿದ್ದು ಕಡೆಗೆ 

ಐವರೇ ಸಾಗಿದ್ದು ಗೆಲುವಿನೆಡೆಗೆ

ಜಯಿಸಿದ್ದು ಸತ್ಯಧರ್ಮ ನಡೆಗೆ

ಇದುವೆ ಆ ನಿಯಾಮಕನ ಬಗೆ.!


ಯುಗ ಯುಗಗಳಿಂದಲೂ ಹೀಗೆ

ಜಗನ್ನಾಥನ ಜಗನೀತಿಯೇ ಹಾಗೆ

ಅಂಕೆ ಸಂಖ್ಯೆಯೆಲ್ಲ ಕಾಲಡಿಗೆ

ಸತ್ಯ ಧರ್ಮಗಳೆಂದು ಶಿರದೆಡೆಗೆ

ನ್ಯಾಯ ನೀತಿಗಳೇ ಅಡಿಗಡಿಗೆ

ಕೆಡುಕು ಕತ್ತಲ ಕಾಲಗರ್ಭದಡೆಗೆ

ಒಳಿತೆಂದು ಸದಾ ಬೆಳಕಿನೆಡೆಗೆ.!


ಎ.ಎನ್.ರಮೇಶ್.ಗುಬ್ಬಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Tags

Post a Comment

0 Comments
Post a Comment (0)
Advt Slider:
To Top