ಶುದ್ಧೀಕರಣ ತಂತ್ರಗಳ ಕಾರ್ಯಯೋಜನೆ ಅಗತ್ಯ : ಡಾ. ರವಿಕುಮಾರ್ ವೇಲಾಯುತಮ್

Upayuktha
0



ವಿದ್ಯಾಗಿರಿ:‘ಔಷಧೀಯ ಕೈಗಾರಿಕೆಗಳಲ್ಲಿ ಪ್ರತ್ಯೇಕತೆ ಮತ್ತು ಪಾತ್ರ ನಿರೂಪಣೆಯ ತಂತ್ರಗಳು ಹಾಗೂ ಸಂಯುಕ್ತಗಳನ್ನು ಬೇರ್ಪಡಿಸುವ ರೀತಿ ಮತ್ತು ಶುದ್ಧೀಕರಣ ತಂತ್ರಗಳ ಕಾರ್ಯಯೋಜನೆಯ ಬಗ್ಗೆ ತಿಳಿವಳಿಕೆ ಅತ್ಯಗತ್ಯ’ ಎಂದು ಸಿಂಜಿನ್ ಮುಖ್ಯ ತನಿಖಾಧಿಕಾರಿ ಡಾ. ರವಿಕುಮಾರ್ ವೇಲಾಯುತಮ್ ಹೇಳಿದರು. 




ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರ ವಿಭಾಗವು ಸಿಂಜಿನ್ ಕಂಪೆನಿಯ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡ ‘ಔಷಧೀಯ ಕೈಗಾರಿಕೆಗಳಲ್ಲಿ ಬಳಸುವ ಪ್ರತ್ಯೇಕತೆ ಹಾಗೂ ಪಾತ್ರ ನಿರೂಪಣೆಯ ತಂತ್ರಗಳು’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 




‘ಸಿಂಜಿನ್  ಕಂಪೆನಿಯು ಮುಖ್ಯವಾಗಿ ಗುಣಮಟ್ಟದ ಮೇಲೆ ಕೇಂದ್ರೀಕೃತವಾಗಿದೆ.  ಸಿಂಜಿನ್ ಕಂಪೆನಿಯು ಜಾಗತಿಕ ಒಪ್ಪಂದದ ಸಂಶೋಧನಾ ಸಂಸ್ಥೆಯಾಗಿದೆ. ಸಣ್ಣ ಅಣುಗಳು ಮತ್ತು ಜೈವಿಕಗಳ ಆವಿಷ್ಕಾರ, ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಮಾಡುತ್ತದೆ’ ಎಂದರು.   




ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರುವ ಕಾರಣ, ಸಿಂಜಿನ್ ಕಂಪೆನಿಯು ಗುಣಮಟ್ಟ ದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಪ್ರಪಂಚದಾದ್ಯಂತ ಜನರಿಗೆ ಶಿಕ್ಷಣ ನೀಡುವ ಸಲುವಾಗಿ ಕೈಗಾರಿಕೆಗಳು ತೆರೆದಿದ್ದು, ಅದರ ಪ್ರಾಯೋಗಿಕ ಕಲಿಕೆಯನ್ನು ತಿಳಿದುಕೊಳ್ಳುವುದು ಅನಿವಾರ್ಯ ಎಂದರು.




ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ  ಪ್ರೋ ರಾಜಕುಮಾರ್ ಭಟ್, ವಿಶ್ಲೇಷಣಾತ್ಮಕ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾಸುಕನ್ಯಾ ಇದ್ದರು. ಸಹಾಯಕ ಪ್ರಾಧ್ಯಾಪಕಿ ರಂಜಿತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top