ಆಂಧ್ರಹಳ್ಳಿ ನೆಮ್ಮದಿ ವಿಶ್ರಾಂತಿ ಧಾಮದಲ್ಲಿ ನೂತನ ವರ್ಷ 2024ರ ದಿನದರ್ಶಿಕೆ ಬಿಡುಗಡೆ

Upayuktha
0



ಆಂಧ್ರಹಳ್ಳಿ: ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಆಂಧ್ರಹಳ್ಳಿಯಲ್ಲಿರುವ  ವೃದ್ದಾಶ್ರಮ, ನೆಮ್ಮದಿ ವಿಶ್ರಾಂತಿಧಾಮದಲ್ಲಿ ನೂತನ ವರ್ಷದ ದಿನದರ್ಶಿಕೆಯನ್ನು ಶಾಸಕರಾದ ಶ್ರೀ  T. S. ಸೋಮಶೇಖರ್ ಅವರು ಬಿಡುಗಡೆ ಮಾಡಿ ಆಶ್ರಮದಲ್ಲಿರುವ ಹಿರಿಯ ನಾಗರಿಕರ ನೋವಿಗೆ ಸ್ಪಂದಿಸಿ ಅವರ ಬೇಡಿಕೆಗಳು  ಏನೆಂಬುದನ್ನು ಮನಗಂಡು ಯಾವುದೇ ರೀತಿಯ ಸಹಾಯವನ್ನು ಮಾಡುವುದಾಗಿ ಭರವಸೆನ್ನು ಕೊಟ್ಟು ಎಲ್ಲಾ ಹಿರಿಯರ ಮನಸ್ಸನ್ನು ಗೆದ್ದಿರುವುದು ಶಾಸಕರಲ್ಲಿರುವ ಮನೋ ಸಂಕಲ್ಪಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿತ್ತು. 




ಶಾಸಕರು ಸಭೆಯಲ್ಲಿ ಮಾತನಾಡುತ್ತಾ, ದಿನವಿಡೀ ನಾನಾ ಕಡೆಗೆ ಹೋಗಿ ದಣಿದು ಬಂದು ನೆಮ್ಮದಿ ವಿಶ್ರಾಂತಿ ಧಾಮಕ್ಕೆ ಬಂದಾಗ ಹಿರಿಯರ ಜೊತೆ ಬೆರೆತು ಕಷ್ಟವನ್ನೆಲ್ಲ ಮರೆತು ಸಂತೋಷವಾಗಿ ಕಾಲ ಕಳೆದು ಇರುವ ಸ್ಥಳವೇ ನೆಮ್ಮದಿ ಎಂದು ಅವರ ವಯಕ್ತಿಕ ಜೀವನವನ್ನೇ ಆಧಾರವಾಗಿಟ್ಟುಕೊಂಡು ಸಭೆಗೆ ತಿಳಿಸಿದರು.  




ಈ ಸಂದರ್ಭದಲ್ಲಿ 100ಕ್ಕೂ ಮಿಗಿಲಾದ ಹಿರಿಯ ನಾಗರಿಕರನ್ನು ನೋಡಲು ಬರುವಂತಹ ಕುಟುಂಬದವರಿಗೆ ಹಾಗೂ ಇತರರಿಗೆ ಮಾರ್ಗದರ್ಶಿಯಾಗುವ ಒಂದು ಕಾಮಾನನ್ನು ಮುಖ್ಯರಸ್ತೆಯಲ್ಲಿ ಮಾಡಿ ಕೊಡುವುದಾಗಿ ಭಾರವಸೆಯನ್ನು ಕೊಟ್ಟು ಎಲ್ಲಾ ಹಿರಿಯ ನಾಗರಿಕರಿಗೆ ಹಾಗೂ 40ಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.




ಸಮಾರಂಭದ ಮುಖ್ಯಅತಿಥಿಗಳಾಗಿ ಆಗಮಿಸಿದ ಮಾಜಿ ಡಿ. ಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕರೂ, ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಡಾ. ಮುದ್ದು ಮೋಹನ್ ಅವರು ಮಾತನಾಡುತ್ತಾ ಒಂದು ವೃದ್ಧಾಶ್ರಮವನ್ನು ಇಷ್ಟೊಂದು ಉತ್ತಮ ರೀತಿಯಲ್ಲಿ ಬೇಕಾದ ಎಲ್ಲಾ ಸೌಲಭ್ಯಗಳೊಂದಿಗೆ ನಡೆಸುತ್ತಿರುವ ನೆಮ್ಮದಿ ಆಶ್ರಮದ ಆಡಳಿತ ಮಂಡಳಿ ಹಾಗೂ ನೌಕರರನ್ನು ಅಭಿನಂದಿಸಿದರು.




ಪ್ರಾರಂಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಚಟುವಟಿಕೆ ಗಳನ್ನು ಸಭಿಕರಿಗೆ ತಿಳಿಸಿತ್ತಾ ಆಡಳಿತ ಟ್ರಸ್ಟಿ ಹಾಗೂ ಯೋಗ ಚಿಕಿತ್ಸಕರಾದ ಶ್ರೀ  P.C. ಮುಕುಂದ ರಾವ್ ರವರು 18 ವರ್ಷಗಳಿಂದ ನಾನಾ ತರಹದ ಕಷ್ಟಗಳನ್ನು ಅನುಭವಿಸಿ ಸಮಾಜದಲ್ಲಿ ಯಾರಿಗೂ ಬೇಡವಾದ ಹಿರಿಯ ನಾಗರಿಕರನ್ನು ಅತ್ಯಂತ ಗೌರವಯುತವಾಗಿ ನೋಡಿಕೊಳ್ಳುವ ಸಂಸ್ಥೆಗೆ ಸರ್ಕಾರದಿಂದ ಯಾವುದೇ ಸವಲತ್ತುಗಳು ದೊರೆಯುತ್ತಿಲ್ಲ ಎಂದು ತಿಳಿಸಿ ದಾನಿಗಳ ಸಹಕಾರವನ್ನು ಕೋರಿದರು.




ಸಮಾರಂಭದಲ್ಲಿ ಸಂಸ್ಥಾಪಕ ಟ್ರಸ್ಟಿ ಶ್ರೀಮತಿ ಚಂದ್ರಮತಿ S ರಾವ್, ಕಾರ್ಯ ನಿರ್ವಾಹಕ ಟ್ರಸ್ಟಿ ಶ್ರೀ S ಸುಬ್ರಮಣ್ಯ, ಟ್ರಸ್ಟಿಗಳಾದ ಶ್ರೀ ಕೃಷ್ಣ ಮುರಾರಿ, ಶ್ರೀ. M. ಮೋಹನ್, ಶ್ರೀ . M. ವೇಣುಗೋಪಾಲ ರಾವ್ ಹಾಗೂ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.



-ಯೋಗಾಚಾರ್ಯ

P. C  ಮುಕುಂದ ರಾವ್

ಆಡಳಿತ ಟ್ರಸ್ಟಿ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top