ನ್ಯಾಚುರಲ್ ಬಾಡಿ ಬಿಲ್ಡಿಂಗ್ ವರ್ಲ್ಡ್ ಕಪ್: 2 ಚಿನ್ನ, 1 ಬೆಳ್ಳಿ ಗೆದ್ದ ಶೋಧನ್ ರೈ

Upayuktha
0


ಮಂಗಳೂರು: ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ವರ್ಲ್ಡ್ ಕಪ್ -23 ಇದರಲ್ಲಿ ಬೆಂಗಳೂರಿನ ಶೋಧನ್ ರೈ 2 ಚಿನ್ನ ಹಾಗೂ 1 ಬೆಳ್ಳಿ ಗೆದ್ದಿದ್ದಾರೆ. 40 ದೇಶಗಳ 250ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.


2001ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಶೋಧನ್ ರೈ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಸತತ 4ನೇ ವರ್ಷದಿಂದ ಚಿನ್ನ ಗೆಲ್ಲುತ್ತಿದ್ದಾರೆ. ಲಾಸ್‌ವೇಗಸ್‌ನಲ್ಲಿ ನಡೆದ ನ್ಯಾಚುರಲ್ ಒಲಿಂಪಿಯಾ -23 ಇದರಲ್ಲಿ ಭಾಗವಹಿಸಿರುವ ಶೋಧನ್ ರೈ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಹಂಗೇರಿಯ ಚಿನ್ನ ಹಾಗೂ ಸ್ಪೈನ್ ಬೆಳ್ಳಿ ಗೆದ್ದಿತ್ತು. 10 ದೇಶಗಳ 500ಕ್ಕೂ ಅಧಿಕ ಬಾಡಿಬಿಲ್ಡರ್‌ಗಳು ಭಾಗವಹಿಸಿದ್ದರು.


ಕರ್ನಾಟಕ ಸರ್ಕಾರದಿಂದ 2013ರಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಮೂಲತಃ ಪುತ್ತೂರಿನವರಾಗಿದ್ದು, ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ದಿ. ಜೆ.ಎನ್.ರೈ ಅವರ ಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top