ಬಹುಮುಖ ಪ್ರತಿಭೆಗಳ ಕಲಾ ಮಾಣಿಕ್ಯ ಕು. ಅರ್ಚನಾ ಸಂಪ್ಯಾಡಿ

Upayuktha
0

ಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಅಂತರ್ಗತವಾಗಿರುತ್ತದೆ. ಅದು ಹುಟ್ಟಿನಿಂದಲೇ ವಿಕಾಸಗೊಳ್ಳುತ್ತಾ ಬರುತ್ತದೆ. ಪ್ರತಿಭಾ ವಿಕಾಸಕ್ಕೆ ಬಾಲ್ಯದಿಂದಲೇ ವೇದಿಕೆ, ಪ್ರೋತ್ಸಾಹ ಅತ್ಯಗತ್ಯ. ಅದನ್ನು ಅನಾವರಣಗೊಳಿಸಲು ಯೋಗ್ಯ ಗುರುಗಳ ಆಶೀರ್ವಾದವೂ ಅಗತ್ಯ. ಕರ್ನಾಟಕ, ಭಾರತದೇಶ ನಾಡುನುಡಿ ಕಲೆ ಸಾಹಿತ್ಯಗಳ ಕೋಶ. ಕಿರಿಯರಿಂದ ಹಿರಿಯರ ತನಕ ಅದೆಷ್ಟೋ ಪ್ರತಿಭೆಗಳು ನಾಡಿನ, ದೇಶದ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ.


ಅಂತೆಯೇ ಇಲ್ಲೊಬ್ಬ ಬಾಲಪ್ರತಿಭೆ ತನ್ನ ಬಹುಮುಖ ಸಾಧನೆಗಳೊಂದಿಗೆ ಬೆಳಗುತ್ತಿದ್ದಾಳೆ. ಆಕೆಯೇ ಕು.ಅರ್ಚನಾ ಸಂಪ್ಯಾಡಿ.  ಅವಕಾಶಗಳ ಸದುಪಯೋಗದೊಂದಿಗೆ ಸಾಂಸ್ಕೃತಿಕ ಲೋಕದಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾಳೆ. ಈಕೆಯ ಸಾಧನೆಯ ಹಾದಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿರುವವರು ತಂದೆ ಸುದರ್ಶನ್ ಹಾಗೂ ತಾಯಿ ರಮ್ಯಾ ಸುದರ್ಶನ್. ಇಂದು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಈ ಬಾಲಪ್ರತಿಭೆ ತನ್ನ ಪ್ರಾಥಮಿಕ ಶಿಕ್ಷಣವನ್ನು Bishop policorposse public school  ಉದನೆಯಲ್ಲಿ ಪಡೆಯುತ್ತಿದ್ದು, ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾಸಂಸ್ಥೆಯಲ್ಲೂ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಈಕೆ ತನ್ನ ಶಾಲೆಯ ಶಿಕ್ಷಕರಿಗೆ ಹಾಗೂ ನೃತ್ಯ ಸಂಸ್ಥೆಯ ಗುರುಗಳ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಾಳೆ.



ತನ್ನ ಎರಡೂವರೆ ವಯಸ್ಸಿನಲ್ಲಿ ಶ್ರೀ ಕೃಷ್ಣ ವೇಷಧಾರಿಯಾಗಿ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದು ಕೊಂಡು ಕಲಾ ಜೀವನಕ್ಕೆ ಕಾಲಿರಿಸಿ ಮುಂದಕ್ಕೆ ಯೋಗಾಭ್ಯಾಸ, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಸಂಗೀತ, ಯಕ್ಷಗಾನ, ಮಾಡೆಲಿಂಗ್, ನಟನೆಯಲ್ಲೂ ಸೈ ಎನಿಸಿಕೊಂಡ ಈ ಬಾಲಕಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಶ್ರೀಮತಿ ಪ್ರೀತಿಕಲಾ ಹಾಗೂ ವಿದ್ವಾನ್ ಬಿ ಗಿರೀಶ್ ಕುಮಾರ್ ರವರಿಂದ ಭರತನಾಟ್ಯ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಜೊತೆಗೆ ಸಂಗೀತ ಶಿಕ್ಷಣವನ್ನು ಶ್ರೀಮತಿ ಪದ್ಮಾವತಿ ಬಾಳ್ತಿಲ್ಲಾಯ ರವರಿಂದ ಕಲಿಯುತ್ತಿದ್ದು, ಕಳೆದ 4ವರ್ಷಗಳಿಂದ "ಕುಶಾಲಪ್ಪ ನಮ್ಮ ಕಲಾವಿದೆರ್" ಇವರ ಸಾರಥ್ಯದ 'ನಟವಯ೯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ'ಯಲ್ಲಿ ಪಾಶ್ಚಾತ್ಯ ನೃತ್ಯ ತರಬೇತಿ ಹಾಗೂ ಕಥಕ್ ನೃತ್ಯವನ್ನು ತನ್ನ ಗುರುಗಳಾದ ಅಕ್ಷಯ್ ಎಚ್ ಪುತ್ತೂರು, ಕಿರಣ್ ಮುರಳಿ ಬ್ರದರ್ಸ್ ಪುತ್ತೂರು, ಸುಮಂತ್ ಆಚಾರ್ಯ ಪುಂಜಾಲ್ ಕಟ್ಟೆ ಹಾಗೂ ನಾಟ್ಯ ವಿದುಷಿ ಹಿಮಾ ತಿರುಮಲೇಶ್ ರವರಿಂದ ಕಲಿಯುತ್ತಿದ್ದಾರೆ.


ಈಗಾಗಲೇ 600ಕ್ಕಿಂತಲೂ ಹೆಚ್ಚು ವೇದಿಕೆಯಲ್ಲಿ ಪ್ರತಿಭಾ ಪ್ರದರ್ಶನ ನೀಡಿದ ಸಾಧನೆ ಈಕೆಯದು. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿ ದ್ದಾಳೆ. ಟಿವಿ ಮಾಧ್ಯಮಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಲಾಕ್ ಡೌನ್ ಸಂದರ್ಭದಲ್ಲಿಯೂ ಸಮಯವನ್ನು ವ್ಯರ್ಥ ಮಾಡದೆ ಸಂಘಸಂಸ್ಥೆಗಳು ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ ಹಾಗೂ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಈ ಪ್ರತಿಭೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಪಾರಿತೋಷಕಗಳನ್ನು ನೀಡಿ ಗೌರವಿಸಿದ್ದು, ತನ್ನ ಊರಿನ ಹಿರಿಮೆಯನ್ನು ಬೆಳಗಿಸಿದ್ದಾಳೆ.


ಕೇವಲ ಮೊಬೈಲ್, ಗೇಮ್ಸ್ ಎಂದು ಕಾಲಹರಣ ಮಾಡದೆ ತನ್ನ ಅವಿರತ ಪ್ರಯತ್ನದ ಮೂಲಕ ವಿಶೇಷವಾಗಿ ಬೆಳಗುತ್ತಿರುವ ಪ್ರತಿಭಾ ಸಂಪನ್ನೆ ಕು.ಅರ್ಚನಾ ಸಂಪ್ಯಾಡಿ.


ಮಕ್ಕಳ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಪ್ರತಿಭಾ ಚೇತನ ಪುರಸ್ಕಾರ, ಕಲಾಸಿರಿ ರತ್ನ ಪುರಸ್ಕಾರ ಪ್ರತಿಭಾ ಸಿರಿ ಪ್ರಶಸ್ತಿ, ಬೆಸ್ಟ್ ಅಚೀವರ್ ಅವಾರ್ಡ್, ಜಟಾಯು ಶಾಪಿಂಗ್ ಫೋರ್ಸ್ ಪ್ರೈ ಲಿಮಿಟೆಡ್ ಬೆಂಗಳೂರು ಇವರು ಆಯೋಜಿಸಿದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ನೃತ್ಯ ಕಲಿಯುವ ಸಂಸ್ಥೆಗೆ ಬೆಸ್ಟ್ ಡ್ಯಾನ್ಸ್ ಇನ್ಸ್ ಸ್ಟಿಟ್ಯೂಟ್ ಅವಾರ್ಡ್ ಲಭಿಸಲು ಮುಖ್ಯ ಕಾರಣವಾಗಿದ್ದಾಳೆ. ತನ್ನ ವಯಸ್ಸಿಗೂ ಮೀರಿದ ಸಾಧನೆ ಅರ್ಚನಾ ಸಂಪ್ಯಾಡಿ ಈಕೆಯದ್ದು.


ರಾಜ್ಯಮಟ್ಟದ ಚೈತನ್ಯ ಶ್ರೀ ಕರುನಾಡ ರತ್ನ ಪುರಸ್ಕಾರ, ರಾಜ್ಯಮಟ್ಟದ ಕನ್ನಡ ಶ್ರೀ ಪ್ರಶಸ್ತಿ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಬಾಲ ಪ್ರತಿಭಾ ಪುರಸ್ಕಾರ, ವಿಶ್ವ ತಾಯಂದಿರ ದಿನದ ಅಂಗವಾಗಿ ನಡೆದ ನನ್ನ ಅಮ್ಮ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ತನ್ನ ತಾಯಿಗೆ 'ನಟವಯ೯ ಮಾತೆ' ಪುರಸ್ಕಾರ, ಗೌರವ ತಂದುಕೊಟ್ಟ ಪ್ರತಿಭೆ.


ಇಂಡಿಯನ್ ಎಕ್ಸಲೆಂಟ್ ಅವಾರ್ಡ್, ಹೈಬ್ರಿಡ್ ನ್ಯೂಸ್‌ನಲ್ಲಿ ಲೈವ್ ನೃತ್ಯ ಪ್ರದರ್ಶನ ನಾಟ್ಯ ಕಲಾ ಕಲ್ಚರಲ್ ಅಕಾಡೆಮಿ ಆಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಡ್ಯಾನ್ಸಿಂಗ್ ಸ್ಟಾರ್ ಆಫ್ ಕರ್ನಾಟಕ  ಬಿರುದನ್ನು ಪಡೆದಿರುತ್ತಾಳೆ. ರಾಷ್ಟ್ರ ಮಟ್ಟದ ಭರತನಾಟ್ಯ ಸ್ವರ್ಧೆಯಲ್ಲಿ ಪ್ರಥಮ, ಅಂತಾರಾಷ್ಟ್ರೀಯ ಮಟ್ಟದ ಕಥಕ್ ಡ್ಯಾನ್ಸಿಂಗ್ 2020 ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಸಾಧನೆಯೊಂದಿಗೆ ಇಂಡಿಯನ್ ಎಕ್ಸಲೆಂಟ್ ಅವಾರ್ಡ್ ಪುರಸ್ಕಾರ, ಕರ್ನಾಟಕ  ಮಹಿಳಾ ರತ್ನ ಅವಾರ್ಡನ್ನು ಸಹ ಪಡೆದಿರುತ್ತಾಳೆ.


ನವ ಪರ್ವ ಫೌಂಡೇಶನ್ (ರಿ)ಬೆಂಗಳೂರು ನಡೆಸಿದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹೆಜ್ಜೆ ಗೆಜ್ಜೆಯಲ್ಲಿ ಪ್ರಥಮ ಸ್ಥಾನ, ತುಳುನಾಡ ಜವನೆರ್ ಬೆಂಗಳೂರು ನಡೆಸಿದ ನಲಿಪು ನವಿಲೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂಘಟಕರ ಮೆಚ್ಚುಗೆ ಪ್ರಶಸ್ತಿ, ಮುಂಬಯಿ ಅವರು ನಡೆಸಿದ ದಿಲ್ ಸೆ ಡ್ಯಾನ್ಸ್ ಸಂಸ್ಥೆಯಲ್ಲಿ ಅತ್ಯುತ್ತಮ ಅಭಿವ್ಯಕ್ತಿ ಪ್ರಶಸ್ತಿ (best expressive), ಪಾದ ಹಸ್ತ ಡ್ಯಾನ್ಸ್ ಅಸೆಂಬ್ಲಿ ಶ್ರೀರಂಗ ನಡೆಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೆಸ್ಟ್ ಕ್ಲಾಸಿಕಲ್ ಡ್ಯಾನ್ಸರ್ ಅವಾರ್ಡ್, ಟವಯ೯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರು ನೀಡುವ ವರ್ಷದ "ನಟವಯ೯ ಕಲಾ ಸಾಧಕಿ" ಪ್ರಶಸ್ತಿ ಪಡೆದಿರುತ್ತಾಳೆ.


ಬಿಪಿಪಿಎಸ್ ಸ್ಕೂಲ್ ಉದನೆ ಇವರು "ಬೆಸ್ಟ್ ಡ್ಯಾನ್ಸರ್" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.



ನಮ್ಮ ಟಿವಿ ಹಾಗೂ ಪಿಕ್ಸ್ ಆರ್ಟ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಡ್ಯಾನ್ಸ್ ಚಾಂಪಿಯನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಎ .ಆರ್. ಗೋಣಿಕೊಪ್ಪಲು ಕೊಡಗು ಇವರು ನಡೆಸಿದ ಮಾನ್ಸೂನ್ ಮೂವೀಸ್ ಸೀಸನ್ 1 ಸ್ಪರ್ಧೆಯಲ್ಲಿ ಅಪ್ ಕಮಿಂಗ್ ಡ್ಯಾನ್ಸರ್ ಅವಾರ್ಡನ್ನು ಪಡೆದಿರುತ್ತಾಳೆ.


ಚಿಗುರು ಕಲ್ಚರಲ್ ಹಾಗೂ ಚಾರಿಟೇಬಲ್ ಟ್ರಸ್ಟ್ (ರಿ)ಬೆಂಗಳೂರು ಇವರಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ "ಕಲಾ ಮಾಣಿಕ್ಯ" ಬಿರುದು ಪುರಸ್ಕಾರ, PRKಕಲ್ಚರಲ್ ಚಾನಲ್ ರವರು ಆಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ "ಬೆಸ್ಟ್ ಪರ್ಫಾಮೆನ್ಸ್" ಅವಾರ್ಡ್, ಮಂಜುನಾಥಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 38ನೇ ಆಲ್ ಇಂಡಿಯಾ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವಲ್ 2021 ನಲ್ಲಿ "ಶ್ರೀ ಮಂಜುನಾಥ ನ್ಯಾಷನಲ್ ಅವಾರ್ಡ್ 2021" ನೃತ್ಯ ವಿದ್ಯಾ ಡ್ಯಾನ್ಸ್ ಅಕಾಡೆಮಿ ಮಹೋಬಾ (ಉತ್ತರ ಪ್ರದೇಶ) ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಜಟಾಯು ಸ್ಟಾಪಿಂಗ್ ಫೋರ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಆಯೋಜಿಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ "ಬೆಸ್ಟ್ ಪರ್ಫಾಮೆನ್ಸ್" ಅವಾರ್ಡ್, ಸಂಕೇತ್ ಸ್ಟುಡಿಯೋ ಆಯೋಜಿಸಿದ SS&KA12 ನೃತ್ಯ ಸ್ಪರ್ಧೆಯಲ್ಲಿ "ವಿನ್ನರ್ ಅವಾರ್ಡ್", ಅಂತೆಯೇ ಈಕೆ ಜನಸ್ಪಂದನ ಟ್ರಸ್ಟ್ ಬೆಂಗಳೂರು ಇವರು ಆಯೋಜಿಸುವ ಪ್ರತೀವಾರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿರುತ್ತಾಳೆ. ಆಮಂತ್ರಣ ಸಂಸ್ಕೃತ ಸಿರಿ ಇವರು ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವು ಗೌರವಗಳನ್ನು ಪಡೆದುಕೊಂಡ ಬಾಲಪ್ರತಿಭೆ. ವಾಯ್ಸ್ ಆಫ್ ಆರಾಧನ, ಚಿಲಿಪಿಲಿ ಬಳಗ, ಕಲಾಪ್ರತಿಭೆ ಫೇಸ್ ಬುಕ್ ಪೇಜ್‌ನಲ್ಲಿ ಆಸಕ್ತಿಯಿಂದ ಪಾಲ್ಗೊಂಡು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾಳೆ.



ಇತ್ತೀಚೆಗಷ್ಟೇ ಯಕ್ಷ ರಂಗದಲ್ಲಿ ವೇಷ ತೊಟ್ಟು, ಯಕ್ಷ ರಸಿಕರ ಮನದಲ್ಲಿ ಪ್ರಶಂಸೆಗೆ ಪಾತ್ರರಾದ ಕುಮಾರಿ ಅರ್ಚನಾ ಇವರ ಪ್ರತಿಭೆಗೆ ನೀಡಿದ ಕೈಗನ್ನಡಿ.


DIJIWORLD TV ಯ ಐಸಬಾಸ್ ಕಾರ್ಯಕ್ರಮ, ZOOM TV ನೃತ್ಯ ಪ್ರದರ್ಶನ, ಸುದ್ದಿ ಚಾನೆಲ್‌ನ ನೃತ್ಯ ಪ್ರದರ್ಶನ, ಸ್ಪಂದನ TV    ನೃತ್ಯ ಪ್ರದರ್ಶನ ಹಾಗೂ ರಿಯಾಲಿಟಿ  ಶೋಗಳಲ್ಲಿ ಭಾಗವಹಿಸಿದ್ದಾಳೆ.  


ಉಪಯುಕ್ತ ಇ-ಪೇಪರ್ ಓದಲು ಕ್ಲಿಕ್‌ ಮಾಡಿ:


ಯೋಗಾಭ್ಯಾಸದ ಕಡೆ ಒಲವು ತೋರಿದ ಇವರು ಶರತ್ ಮರ್ಗಿಲಡ್ಕ ಇವರಿಂದ ಯೋಗ ತರಬೇತಿ ಪಡೆದು ಇತ್ತೀಚೆಗೆ ಗಿಸಾ ವಲ್ಡ್ ರೆಕಾರ್ಡ್ ಸಂಸ್ಥೆ ಆಯೋಜಿಸಿದ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಮಾಡಿದ್ದಾಳೆ.


ಇವಳು ಯುವ ವಾಹಿನಿ ಕಡಬ ಘಟಕ, ಯುವ ವಾಹಿನಿ ಅರಸಿನಮಕ್ಕಿ ಘಟಕ, ಯುವ ವಾಹಿನಿ ಉಪ್ಪಿನಂಗಡಿ ಘಟಕ, ಯುವ ವಾಹಿನಿ ಪುತ್ತೂರು ಘಟಕ, ಶ್ರಮಿಕ ಸೇವಾ ಟ್ರಸ್ಟ್ ಬೆಳ್ತಂಗಡಿ, SNDP ಶಾಖೆ ಸೋಣಂದೂರು, ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ  ಗೌರವಯುತ ಸನ್ಮಾನವನ್ನು ಪಡೆದುಕೊಂಡಿದ್ದಾಳೆ.


ಶ್ರೀ ಕೃಷ್ಣ ಯುವಕ ಮಂಡಲ (ರಿ) ಪುತ್ತೂರು, ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇವರ ವತಿಯಿಂದ ಅರ್ಚನಾಳ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಸನ್ಮಾನ ಹಾಗೂ  ವಿಶೇಷವಾಗಿ ನಟರಾಜ ದೇವರ ವಿಗ್ರಹವನ್ನೂ ನೀಡಿ ಗೌರವಿಸಿದ್ದಾರೆ.



ವಲಯ ಮಟ್ಟದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗಿನ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸುಮಾರು 150ಕ್ಕೂ ಹೆಚ್ಚಿನ ಪ್ರಶಸ್ತಿಗಳನ್ನು ಗಳಿಸಿರುವ ಈ ಪುಟ್ಟ ಬಾಲಕಿಯ ಕಲಾ ಜೀವನ ಅಭಿಮಾನ ತರಿಸುವಂತಿದೆ.


ರಾಜ್ಯದ ಪ್ರತಿಷ್ಠಿತ ‌ ಸಂಸ್ಥೆಗಳಿಂದ ಹಲವು ಪ್ರಶಸ್ತಿ, ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಈಕೆ ನವಿಲೇ ನಾಚುವಂತೆ ಅಧ್ಬುತವಾಗಿ ನರ್ತಿಸುವ ಈಕೆಯ ಬದುಕು ವರ್ಣಮಯವಾಗಿರಲೆಂದು ಹಾರೈಸೋಣ.


- ನವೀನ್ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top