ಮುಳಿಯ ಜ್ಯುವೆಲ್ಸ್‌ ಸಂಸ್ಥಾಪಕರ ದಿನಾಚರಣೆ: ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ 78 ವರ್ಷ

Upayuktha
0



ಪುತ್ತೂರು: ನಾಡಿನ ಹೆಸರಾಂತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಇಂದು ಸಂಸ್ಥಾಪಕರ ದಿನ ಆಚರಿಸಲಾಯಿತು. ಪುತ್ತೂರು, ಬೆಳ್ತಂಗಡಿ, ಗೋಣಿಕೊಪ್ಪಲ್, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಮಳಿಗೆಗಳನ್ನು ಹೊಂದಿರುವ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಕಳೆದ 78 ವರ್ಷಗಳಿಂದ ನಿರಂತರ ಗ್ರಾಹಕರ ಸೇವೆ ಮತ್ತು ಸಂತೃಪ್ತಿಯಲ್ಲಿ ಮನೆಮಾತಾಗಿದೆ.


ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 7, 8 ಮತ್ತು 9ರಂದು ಗ್ರಾಹಕರು ಮುಳಿಯ ಜ್ಯುವೆಲ್ಸ್‌ನಲ್ಲಿ ಖರೀದಿಸುವ ಪ್ರತಿ ಗ್ರಾಂ ಚಿನ್ನದಲ್ಲಿ 50 ರೂ.ಗಳನ್ನು ಸಾಮಾಜಿಕ ಉದ್ದೇಶಗಳಿಗೆ ವಿನಿಯೋಗಿಸಲಾಗುವುದು ಸಂಸ್ಥೆಯ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.


ದಿವಂಗತ ಮುಳಿಯ ಕೇಶವ ಭಟ್ಟರು ಸ್ಥಾಪಿಸಿದ ಮುಳಿಯ ಜ್ಯುವೆಲ್ಸ್‌ ಸಂಸ್ಥೆ ಸಾಮಾಜಿಕ ಕಳಕಳಿಯ ಸ್ವರ್ಣ ಪರಂಪರೆಯಲ್ಲಿ ಇಂದು ಬೃಹತ್ತಾಗಿ ಬೆಳೆದಿದೆ. 



ಗ್ರಾಹಕರು ಹೇಗೆ ಮುಖ್ಯವೋ ಹಾಗೆಯೇ ಸಂಸ್ಥಾಪಕರು ಕೂಡ ಮುಖ್ಯ. ಅವರ ಆಶಯಕ್ಕೆ ಅನುಗುಣವಾಗಿ ಸಂಸ್ಥೆಯನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ನಮ್ಮ ಧ್ಯೇಯ. ನಮ್ಮ ಲಾಭಾಂಶದಲ್ಲಿ ಒಂದು ಅಂಶವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ. ಆ ಮೂಲಕ ಅವರ ಸೇವಾ ಮನೋಭಾವವನ್ನು ಮುಂದುವರಿಸಲು ನಾವು ಬಧ್ಡರಾಗಿದ್ದೇವೆ.

- ಕೇಶವ ಪ್ರಸಾದ್ ಮುಳಿಯ

ಸಿಎಂಡಿ, ಮುಳಿಯ ಜ್ಯುವೆಲ್ಸ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top