ಉಡುಪಿ: ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ನಿವಾಸ ಈಶಾವಾಸ್ಯಂಗೆ ಶುಕ್ರವಾರ ಸಂಜೆ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಮೂಲರಾಮದೇವರು ಮತ್ತು ರಾಯರ ವೃಂದಾವನಕ್ಕೆ ಮಂಗಳಾರತಿ ನೆರವೇರಿಸಿದರು. ಆಚಾರ್ಯರ ಸ್ಮರಣೆಯ ಮ್ಯೂಸಿಯಮ್ ಗ್ರಂಥ ಭಂಡಾರ ಕಂಡು ಅತೀವ ಸಂತಸ ವ್ಯಕ್ತಪಡಿಸಿದರು.
ಬನ್ನಂಜೆ ಗೋವಿಂದಾಚಾರ್ಯರು ಶತಮಾನಕ್ಕೊಬ್ಬ ವಿದ್ವಾಂಸರು. ಗೋವಿಂದಾಚಾರ್ಯರಿಗೆ ಆಚಾರ್ಯ ಮಧ್ವರ, ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲೆ ಗುರುರಾಯರ ಗ್ರಂಥಗಳ ಬಗ್ಗೆ ಅತೀವ ಶ್ರದ್ಧೆ ಭಕ್ತಿ ಇತ್ತು ಎಂದು ಶ್ರೀಗಳು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ