ವಿಕಸಿತ ಭಾರತ ಸಂಕಲ್ಪ ಯಾತ್ರೆ- ಗುರುಪುರದಲ್ಲಿ ಕಾರ್ಯಕ್ರಮ

Upayuktha
0



ಮಂಗಳೂರು: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಾಹನ ಶುಕ್ರವಾರ ಮಂಗಳೂರಿನ ಗುರುಪುರ ತಲುಪಿ ಪಂಚಾಯತ್ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಗುರುಪುರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಫಾರ ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಆಂಟೋನಿ ರಾಜ್, ವೈ. ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೆನರಾ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀಮತಿ ಕವಿತಾ ಶೆಟ್ಟಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ವಿವರಿಸಿ ಇನ್ನು ಸರ್ಕಾರದ ಯೋಜನೆಗಳು ತಲುಪದೇ ಇರುವವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಮ್ಯೂನಿಟಿ ಹೆಲ್ತ್ ಆಫೀಸರ್,ಬಸವರಾಜ್, ಇಂಡಿಯನ್ ಗ್ಯಾಸ್  ಡಿಸ್ಟ್ರಿಬ್ಯೂಟರ್ ,ಪ್ರಣೀತಾ ಉದಯ ಚೌಟ,ಡಾ . ರವೀಂದ್ರ ಗೌಡ ಪಾಟೀಲ್, ಕೆವಿಕೆ ಮಂಗಳೂರು ಭಾಗವಹಿಸಿ ಮಾಹಿತಿ ನೀಡಿದರು. ಬ್ರಾಂಚ್ ಮುಖ್ಯಸ್ಥ ಅಮಿತ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿದ್ದರು.ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಕಜ, ಕಾರ್ಯದರ್ಶಿಅಶೋಕ್ ಉಪಸ್ಥಿತರಿದ್ದರು. ಜ್ವಾಲಾ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಂಪರ್ಕ ಒದಗಿಸಲಾಯಿತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಫಲಾನುಭವಿಗಳು ತಮ್ಮ ಅನುಭವ ವಿವರಿಸಿದರು. 



Post a Comment

0 Comments
Post a Comment (0)
To Top