ಮಹಾಪೆರಿಯವರೂ ರವೀಂದ್ರನಾಥ ಟ್ಯಾಗೋರರು

Upayuktha
0


ಅದು ನವರಾತ್ರಿಯ ಸಮಯ. ಮಹಾ ಪೆರಿಯವರ ಮೊಕ್ಕಾಂ ಕಲ್ಕತ್ತಾದಲ್ಲಿ. ನವರಾತ್ರಿಯ ದೇವಿ ಪೂಜಿಗಳು ವೈಭವೋಪೇತವಾಗಿ ನಡೆಯುತ್ತಿತ್ತು. ಅಮ್ಮನ ಪೂಜೆ ಪೆರಿಯವರಿಗೆ ಮಹಾ ಸಂತೋಷ. ನಿಷ್ಠೆಯ ಕೈಂಕರ್ಯ. ಆ ಪೂಜಾಸಮಾರಂಭಕ್ಕೆ ಅಲ್ಲಿ ಬಹಳ ಭಕ್ತರು ಸೇರುತ್ತಿದ್ದರು.


ಬಹಳ ವರ್ಷಗಳಿಂದ ಕಲ್ಕತ್ತಾದಲ್ಲೇ ನೆಲೆಸಿದ್ದ ತಮಿಳುಮಾಮಿಯೊಬ್ಬರು ಆ ಪೂಜೆಗೆ ಬಂದಿದ್ದರು. ಅವರು ಕಲ್ಕತ್ತಾದಲ್ಲೇ ಇದ್ದುದರಿಂದ ನವರಾತ್ರಿಯ ದುರ್ಗಾಪೂಜೆಯಲ್ಲಿ ಭಾಗವಹಿಸುತ್ತಿದ್ದರು. ಆ ವರ್ಷ ಪೆರಿಯವರು ಅಲ್ಲೇ ಮೊಕ್ಕಾಂ ಮಾಡಿದುದರಿಂದ, ಅಲ್ಲಿಗೇ ಪೂಜೆಗೆ ಬಂದರು.


ಅವರು ದುರ್ಗಾಪೂಜೆಯನ್ನು ರವೀಂದ್ರನಾಥ ಟಾಗೋರರ ಶಾಂತಿನಿಕೇತನದಲ್ಲಿ ಆಚರಿಸುತ್ತಿದ್ದರು. ಅಲ್ಲಿಗೆ ನಿಯಮಿತವಾಗಿ ಹೋಗುತ್ತಿದ್ದ ಕಾರಣ, ಅವರ ಪರಿಚಯ ಟ್ಯಾಗೋರರಿಗೆ ಚೆನ್ನಾಗಿಯೇ ಇತ್ತು. ಈ ಮಧ್ಯದಲ್ಲಿ, ಒಂದು ದಿನ ಶಾಂತಿನಿಕೇತನಕ್ಕೆ ಹೋದರು.

ಟಾಗೋರರು ಇಷ್ಟು ದಿನ ಏಕೆ ಬರಲಿಲ್ಲವೆಂದು ಕೇಳಿದಾಗ, ತಾವು ಮಹಾಪೆರಿಯವರ ನವರಾತ್ರಿ ಪೂಜೆಗೆ ಹೋಗುತಿದ್ದೇನೆಂದು ಹೇಳಿದರು. ಆಗ ಮಹಾಪೆರಿಯವರು ಇನ್ನೂ ಕಂಚಿ ಪರಮಾಚಾರ್ಯರೆಂದೇ ಗುರುತಿಸಲ್ಪಡುತ್ತಿದ್ದ ಕಾಲ. ಆ ಸಮಯದಲ್ಲಿ ನವಾವರ್ಣ ಪೂಜೆ, ಸುಮಂಗಲಿ ಪ್ರಾರ್ಥನೆ, ಕನ್ಯಾಪೂಜೆ ಎಲ್ಲ ನಡೆಯುತ್ತಿತ್ತು. ಹಾಗೇ, ಕಲ್ಕತ್ತಾದಲ್ಲಿ ದುರ್ಗಾ ಪೂಜೆಯೂ ಅದ್ದೂರಿಯಾಗಿ ನಡೆಯುತ್ತಿತ್ತು.


ಟ್ಯಾಗೋರರು ಕಂಚಿಪರಮಾಚಾರ್ಯರ ಬಗೆಗೆ ಕೇಳಿ ತಿಳಿದಿದ್ದರು.

ಆವರ ಬಗ್ಗೆ ವಿಚಾರಿಸುತ್ತಾ, ಕನ್ಯಾಪೂಜೆಯ ಬಗ್ಗೆ ವಿಚಾರಿಸಿದರು. ಹಾಗೆಯೇ ಕನ್ಯಾಪೂಜೆಯಲ್ಲಿ ಬರಿಯ ಬ್ರಾಹ್ಮಣ ಕನ್ಯೆಯರನ್ನೇ ಪೂಜಿಸುವುದರ ಬಗ್ಗೆಯೂ. ಅದರ ಬಗ್ಗೆ ಪರಮಾಚಾರ್ಯರನ್ನು ವಿವರಣೆ ಕೇಳಿ ಬರಲು ಆ ಮಹಿಳೆಗೆ ಹೇಳಿದರು. ಅದು ಒಂದು ತರಹ ಮುಚ್ಚಿಟ್ಟ ಟೀಕೆಯಂತಿತ್ತು. ಅದನ್ನು ಕೇಳಿದ ಮಹಿಳೆಗೆ ಬಹಳ ಖೇದವಾಯಿತು.. ಆನಂತರ ಮತ್ತೆ ಕಂಚಿ ಪರಮಾಚಾರ್ಯರ ಬಳಿಗೆ ಬರುತ್ತಾಳೆ. ಅಲ್ಲಿ ಶ್ರೀಗಳಿಗೆ, ಹಿಂಜರೆಯುತ್ತಲೇ, ಅವರು ಕನ್ಯಾಪೂಜೆಯಲ್ಲಿ ಬರಿಯ ಬ್ರಾಹ್ಮಣ ಕನ್ಯೆಯರನ್ವೇ ಪೂಜಿಸುವುದರ ಬಗ್ಗೆ ಕೇಳಿದುದನ್ನು ಹೇಳುತ್ತಾಳೆ.


ಆಗ, ಪೆರಿಯವರು, ಆಬ್ರಹ್ಮ ಕೀಟ ಜನನಿ, ವರ್ಣಾಶ್ರಮ ವಿಧಾಯಿನಿ ಎಂಬ ಅರವತ್ತೇಳನೆಯ ಶ್ಲೋಕವನ್ನು ಅವರಿಗೆ ತಿಳಿಸಲು ಹೇಳುತ್ತಾರೆ. ತಾವು ಅವಳ ಆಜ್ಞಾನುಧಾರಿಗಳು ಅಷ್ಟೇ ಎನ್ನತ್ತಾರೆ. ಅದರ ಅರ್ಥ ಪ್ರಪಂಚದ ಎಲ್ಲಾ ಜೀವಜಂತುಗಳಿಗೆ ತಾಯಿಯು ಅವಳೇ. ವರ್ಣಾಶ್ರಮವನ್ನು ಮಾಡಿರುವವಳು ಅವಳೇ. ಅದನ್ನು ನಿಭಾಯಿಸತ್ತಿರುವವಳು ಅವಳೇ.


ಆ ಮಹಿಳೆ ಪೆರಿಯವರ ಉತ್ತರವನ್ನು ಚ್ಯಾಗೋರರಿಗೆ ತಿಳಿಸುತ್ತಾಳೆ. ಟ್ಯಾಗೋರರು ಕೂಡ ಶ್ರೀಚಕ್ರ ಉಪಾಸಕರು. ಲಲಿತೋಪಾಸಕರು. ಆ ಶ್ಲೋಕವನ್ನು ಮನವ ಮಾಡಿಕಳ್ಳುತ್ತಾರೆ. ಹಾಗೂ ಶ್ರೀಗಳವರನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಭೇಟಿ ಮಾಡುವ ಆಸೆಯನ್ನು ತಿಳಿಸುತ್ತಾರೆ. ಕಾರಣ, ಆ ವೇಳೆಗಾಗಲೇ ಅವರು ಜಗತ್ಪ್ರಸಿದ್ದರಾದ ಲೇಖಕರಾಗಿರುತ್ತಾರೆ. ಅವರ ಈ ಭೇಟಿಯನ್ನು ಜನರು ದುರುಪಯೋಗ ಮಾಡಿಕೊಳ್ಳಬಹುದೆಂದ ಮುನ್ನೆಚರಿಕೆಯಲ್ಲಿ ಅಷ್ಟೇ.


ಆಮೇಲೆ, ಕಲ್ಕತ್ತಾದ ಷೇಟ್ ಹೌಸ್ ನಲ್ಲಿ ಅವರಿಬ್ಬರ ಭೇಟಿಯಾಗುತ್ತದೆ. ಒಬ್ಬರು ಆಧ್ಯಾತ್ಮ ಮೇರು. ಮತ್ತೊಬ್ಬರು ಸರಸ್ವತಿಯ ಪುತ್ರರು. ಅದೊಂದು ಶುಭಮಿಲನ. ಸಂತೃಪ್ತ ಭಾವ. ಪರಸ್ಪರ ಗೌರವಾದರಗಳ ವಿನಿಮಯದ ಭಾವಪೂರಿತ ಕ್ಷಣ.


(ರವೀಂದ್ರರ ನೆನಪಿನ ಚಿತ್ರಗಳಿಂದ)


- ಮೀನಾಕ್ಷಿ ಮನೋಹರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top