ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ದೋಣಿ ವಿನ್ಯಾಸ ಬದಲಾವಣೆಗೆ ಕೇಂದ್ರ ಮೀನುಗಾರಿಕೆ ಸಚಿವರಿಗೆ ಮನವಿ

Upayuktha
0



ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಇವರ ನೇತೃತ್ವದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಪದಾಧಿಕಾರಿಗಳು ಇಂದು ನವದೆಹಲಿಯಲ್ಲಿ ಕೇಂದ್ರ ಮೀನುಗಾರಿಕಾ ಸಚಿವರಾದ ಪರ್ಶೋತ್ತಮ್ ರೂಪಾಲರವರನ್ನು ಭೇಟಿ ಮಾಡಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (PMMSY) ಆಳ ಸಮುದ್ರದ ಮೀನುಗಾರಿಕೆ ಗಿಲ್ ನೆಟ್ ದೋಣಿಗಳ ವಿನ್ಯಾಸದಲ್ಲಿ ಈ ಕೆಳಕಂಡ ಮಾರ್ಪಾಡು ಮಾಡುವಂತೆ ಮನವಿ ಸಲ್ಲಿಸಿದರು.  


· ದೋಣಿಯ ಉದ್ದವನ್ನು 22.70 ಮೀ ನಿಂದ 24.00 ಮೀಗೆ ಹೆಚ್ಚಿಸುವುದು. ಮತ್ತು ದೋಣಿಯ ಅಗಲ 6.40 ಮೀ ನಿಂದ 7.20 ಮೀ. ಹೆಚ್ಚಳ


· ಎಂಜಿನ್ ಅಶ್ವಶಕ್ತಿಯನ್ನು 200 Hp ನಿಂದ 350 HP ಗೆ ಹೆಚ್ಚಿಸುವುದು.


· ದೋಣಿಯ ಹಿಂಭಾಗದಲ್ಲಿರುವ ಕ್ಯಾಬಿನ್ ಅನ್ನು ದೋಣಿಯ ಮಧ್ಯಕ್ಕೆ ಬದಲಾಯಿಸುವುದು.


· ಆಳ ಸಮುದ್ರದ ಮೀನುಗಾರಿಕೆ ಗಿಲ್ನೆಟ್/ಲಾಂಗ್ ಲೈನರ್ ಬೋಟ್ ಜೊತೆಗೆ ಪರ್ಸಿನ್ ಬೋಟ್ ನಿರ್ಮಾಣಕ್ಕೆ ಅನುಮತಿ ನೀಡುವುದು ಸೇರಿದಂತೆ ಮೀನುಗಾರರ ಸಮಸ್ಯೆಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಾಯಿತು. ಮಾನ್ಯ ಸಂಸದರ ನಿಯೋಗದ ಮನವಿಗೆ ಸ್ಪಂದಿಸಿದ ಮಾನ್ಯ ಮೀನುಗಾರಿಕಾ ಸಚಿವರು ಈ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.


ನಿಯೋಗದಲ್ಲಿ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಸುನಿಲ್, ನವಿಲ್ ದಾಸ್, ವಿವೇಕಾನಂದ, ಲೋಕನಾಥ್ ಹಾಗೂ ವಿಲಿಯಂ ಪ್ರಾನ್ಸಿಸ್ ರವರು ಹಾಜರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top