ದುಶ್ಚಟಮುಕ್ತ ಸಮಾಜದ ಕನಸು ನನಸಾಗಿಸೋಣ: ದಯಾನಂದ ಕತ್ತಲ್‌ಸಾರ್

Upayuktha
0


ಬಂಟ್ವಾಳ: ವಿದ್ಯೆ ಇದ್ದರೆ ಸಾಲದು ವಿನಯ, ತಾಳ್ಮೆ, ಉತ್ತಮ ಸಂಸ್ಕಾರವಿದ್ದರೆ ಮಾತ್ರ ಒಳ್ಳೆಯ ವ್ಯಕ್ತಿಯಾಗಿರಬಹುದು. ತುಳುನಾಡಿನ ಸಂಸ್ಕೃತಿ ಕಟ್ಟುಪಾಡುಗಳಿಗೆ ತನ್ನದೇ ಆದ ಸ್ಥಾನಮಾನವಿದೆ, ಅದನ್ನು ಯಾರು ಬದಲಾಯಿಸಲು ಹೋಗಬಾರದು, ತುಳು ನಾಡಿನಲ್ಲಿ  ಮಾತೆಯರಿಗೆ ಉತ್ತಮ ಸ್ಥಾನ ಹಿರಿಯರ ಕಾಲದಿಂದಲೂ ದೊರೆತಿದೆ. ಅದನ್ನು ಸತ್ಕಾರ್ಯದಲ್ಲಿ ಬಳಸಿ ಉತ್ತಮ ಸಮಾಜ ನಿರ್ಮಾಣ ಮಾಡೋಣ, ಆ ಮೂಲಕ ಮುಂದಿನ ಪೀಳಿಗೆಯೂ ಕೂಡ ಅದನ್ನು ಅನುಸರಿಸುವಂತೆ ಮಾಡೋಣ‌. ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗದೆ ನಮ್ಮ‌ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸೋಣ, ಪೂಜ್ಯ ಖಾವಂದರ ದುಶ್ಚಟಮುಕ್ತ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡೋಣ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ತುಳುವ ಬೊಳ್ಳಿ ದಯಾನಂದ ಜಿ ಕತ್ತಲ್‌ಸಾರ್ ಹೇಳಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯದ ವತಿಯಿಂದ ಅನ್ನಪೂರ್ಣ ಸಭಾಭವನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಮೊಗರ್ನಾಡು, ನರಿಕೊಂಬು ಇಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶಂಬೂರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀ ಕ್ಷೇತ್ರದಿಂದ ಗ್ರಾಮದ ಶಾಲೆ, ದೈವಸ್ಥಾನಗಳ ಅಭಿವೃದ್ಧಿಗೆ ಉತ್ತಮ ಮಟ್ಟದ ಅನುದಾನ ಒದಗಿಸಿದ್ದು ಹಾಗೂ ಆಸಕ್ತರಿಗೆ ನೆರವು, ಮಾಸಾಶನ, ಸುಜ್ಞಾನ ನಿಧಿ, ಸುರಕ್ಷಾ ನೀಡುವುದರ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಮಹತ್ವ ಪಾತ್ರ ವಹಿಸಿರುವ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಪಂಚಾಯತಿ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಜನಜಾಗೃತಿ ವೇದಿಕೆ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ನರಿಕೊಂಬು, ಭಜನ ಸಂಕೀರ್ತನ ಕಾರ್ಯಕ್ರಮವನ್ನು ಉದ್ಘಾಟಿಸಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ಸಂಸ್ಕೃತಿಯ ಭಜನಾ ಸಂಕೀರ್ತನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ  ಮಾಡಿದಂತ ಧಾರ್ಮಿಕ ಕಾರ್ಯಕ್ರಮ ಅರ್ಥಪೂರ್ಣ ವಾಗಿದೆ ಎಂದರು. 


ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಜನಜಾಗೃತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಯೋಜನಾಧಿಕಾರಿ ಸುಧಾ ಜೋಶಿ, ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್(ರೀ) ಮಾರುತಿನಗರದ ಅಧ್ಯಕ್ಷರಾದ ಚಂದ್ರಸ್ ಕೋಡಿಮಜಲು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯದ ಅಧ್ಯಕ್ಷ ಲೀಡಿಯ ಪಿಂಟೋ, ನರಿಕೊಂಬು ಎ, ಬಿ ಒಕ್ಕೂಟಗಳ ಅಧ್ಯಕ್ಷರುಗಳಾದ ಕೃಷ್ಣಪ್ಪ ಸಪಲ್ಯ, ಜಯಂತ, ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಭಜನಾ ಶಿಕ್ಷಕ ಗಣೇಶ್ ನೇತೃತ್ವದಲ್ಲಿ ಕುಣಿತ ಭಜನಾ ತಂಡಗಳಾದ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಶಂಬೂರು, ಓಂ ಶ್ರೀ ಭಜನಾ ಮಂಡಳಿ ನಾಯಿಲ, ಶ್ರೀ ವಿನಾಯಕ ಭಜನಾ ಮಂಡಳಿ ದೋಟ ಕೆದ್ದೇಲ್, ತಂಡಗಳಿಂದ  ಭಜನಾ ಸಂಕೀರ್ತನ ಕಾರ್ಯಕ್ರಮ ನೆರವೇರಿತು.


ಸೇವಾ ಪ್ರತಿನಿಧಿಗಳಾದ ಅಮಿತಾ, ವನಿತಾ, ಅನಿತಾ,ಮಲ್ಲಿಕಾ, ಬಬಿತಾ ಪ್ರಾರ್ಥಿಸಿ, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ವಾಸ್ತವೀಕದೊಂದಿಗೆ ಸಾಗತಿಸಿ, ಸೇವಾ ಪ್ರತಿನಿಧಿ ಕುಸುಮಾವತಿ ವಂದಿಸಿದರು. ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಪ್ರತಿಭಾ ವಸಂತ್ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top