ಕುಂಬಳೆಯಲ್ಲಿ ವಿ.ಬಿ. ಕುಳಮರ್ವ -70 ಸಾಹಿತ್ಯೋತ್ಸವ, ಕೃತಿ ಬಿಡುಗಡೆ, ಗುರು ನಮನ

Upayuktha
0



ಕುಂಬಳೆ: ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಂಟಿ ಆಶ್ರಯದಲ್ಲಿ ಸಾಹಿತಿ, ನಿವೃತ್ತ  ಅಧ್ಯಾಪಕ ವಿ. ಬಿ. ಕುಳಮರ್ವ-70 ಸಾಹಿತ್ಯೋತ್ಸವ  ಕಾರ್ಯಕ್ರಮ ಕುಂಬಳೆ ಬಳಿಯ ನಾರಾಯಣಮಂಗಲದ ಅವರ ನಿವಾಸ 'ಶ್ರೀನಿಧಿ' ಯಲ್ಲಿ  ನಡೆಯಿತು. ವಿ.ಬಿ. ಕುಳಮರ್ವ ಮತ್ತು ಲಲಿತಲಕ್ಷ್ಮಿ ದಂಪತಿಗಳು ಕಾರ್ಯಕ್ರಮ ಉದ್ಘಾಟಿಸಿದರು.


ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವಿರಾಜ್ ಅಡೂರು ರಚಿಸಿರುವ ಗಡಿನಾಡ ಸಾಹಿತ್ಯ ಶ್ರೀ ನಿಧಿ - ವಿ.ಬಿ. ಕುಳಮರ್ವ ಎಂಬ ಕೃತಿಯನ್ನು ವಿಶ್ರಾಂತ ಮುಖ್ಯ ಶಿಕ್ಷಕ ವಾಸುದೇವ ಭಟ್ (ಶಿವ ಪಡ್ರೆ) ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಪತ್ರಕರ್ತ ವಿರಾಜ್ ಅಡೂರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪೆರ್ಲ ವ್ಯಾಪಾರಿ ವ್ಯವಸಾಯಿ ಏಕೋಪಾನ ಸಮಿತಿಯ ಅಧ್ಯಕ್ಷ ಟಿ ಪ್ರಸಾದ್,ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಡಶಾಲಾ ಶಿಕ್ಷಕ ಡಾ. ಸತೀಶ್ ಪುಣಿ೦ಚತ್ತಾಯ  ಭಾಗವಹಿಸಿದ್ದರು. ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ  ಪರಿಷತ್ ನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು. ಎ. ಹಿತೇಶ್ ಕುಮಾರ್, ನವ್ಯ ಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಅಂಗವಾಗಿ ಗುರುನಮನ, ಸನ್ಮಾನ, ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Advt Slider:
To Top