ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವ - ರಿಜಿಸ್ಟ್ರೇಷನ್ ಉದ್ಘಾಟನೆ

Upayuktha
0

ಕಾರಡ್ಕ: ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಶಾಲೆಯಲ್ಲಿ ಡಿಸೆಂಬರ್‌ 5 - 9 ರ ವರೆಗೆ‌ ನಡೆಯಲಿರುವ ಕಾಸರಗೋಡು  ಜಿಲ್ಲಾ ಶಾಲಾ ಕಲೊತ್ಸವದ ರಿಜಿಸ್ಟ್ರೇಷನ್ ಉದ್ಘಾಟನೆಯು ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಶಾಲೆಯಲ್ಲಿ ನಡೆಯಿತು. ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ರಿಜಿಸ್ಟ್ರೇಷನ್ ಉದ್ಘಾಟಿಸಿದರು.


ರಿಜಿಸ್ಟ್ರೇಷನ್ ಚೇರ್ಮನ್ ಹಾಗೂ ಕಾರಡ್ಕ ಪಂಚಾಯತ್ ನ ವಿದ್ಯಾಭ್ಯಾಸ ಸ್ಟಾಂಡಿಂಗ್ ಕಮಿಟಿ ಚೇರ್ಮೇನ್ ರತ್ನಾಕರ ಎ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ನಂದಿಕೇಶನ್, ಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್, ಕಾರಡ್ಕ ಶಾಲೆಯ ರಕ್ಷಕ‌ ಶಿಕ್ಷಕ ಸಂಘದ ಅಧ್ಯಕ್ಷರಾದ ಸುರೇಶ್, ಶಾಲಾ ಮುಖ್ಯೋಪಾಧ್ಯಾಯರಾದ ಸಂಜೀವ, ಕಾರಡ್ಕ ಪಂಚಾಯತ್ ಕಾರ್ಯದರ್ಶಿ ಪ್ರೇಮಲತ, ಪ್ರೋಗ್ರಾಂ ಕಮಿಟಿ ಕನ್ವೀನರ್ ಪ್ರಶಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ರಿಜಿಸ್ಟ್ರೇಷನ್ ಕಮಿಟಿ ಕನ್ವೀನರ್ ರಾಮಚಂದ್ರ ಮಾಸ್ಟರ್ ಸ್ವಾಗತಿಸಿ ಪೆರಡಾಲ ನವಜೀವನದ ಅಧ್ಯಾಪಕರಾದ ಪ್ರಭಾಕರನ್‌ ನಾಯರ್ ವಂದಿಸಿದರು. ಈ ಸಂದರ್ಭದಲ್ಲಿ ಮುಳ್ಳೇರಿಯಾ ಎಯುಪಿಎಸ್ ಶಾಲೆಯ ಇಕೋ ಕ್ಲಬ್ ಹಾಗೂ ಸೀಡ್ ಕ್ಲಬ್ ನ ವತಿಯಿಂದ ಕೊಡಮಾಡಿದ ಬಟ್ಟೆಯ ಚೀಲವನ್ನು ಬಿಡುಗಡೆ ಮಾಡಲಾಯಿತು. ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಪ್ರೋಗ್ರಾಂ ಕನ್ವೀನರ್, ಹಾಗೂ ಸಬ್ ಕಮಿಟಿಗಳ ಕನ್ವೀನರ್ ಗಳು, ಶಾಲಾ ಅಧ್ಯಾಪಕರು, ಮುಳ್ಳೇರಿಯ ಎಯುಪಿಎಸ್ ನ ಇಕೋ ಹಾಗೂ ಸೀಡ್ ಕ್ಲಬ್ ನ ವಿದ್ಯಾರ್ಥಿಗಳು ಹಾಗೂ  ನೇತೃತ್ವ ವಹಿಸಿದ ಸಾವಿತ್ರಿ‌ ಟೀಚರ್ ಸಭೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top