ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯೋಜನಾ ವೇದಿಕೆ, ಗ್ರಂಥಾಲಯ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಸಂತ ಕನಕದಾಸರ ಪುಸ್ತಕಗಳ ಅವಲೋಕನ ಮತ್ತು ವಿಮರ್ಶೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಬಿಎ ವಿದ್ಯಾರ್ಥಿಗಳಾದ ಶ್ರೀನಿವಾಸ ವಡ್ಡರ್ ಹಾಗೂ ಸಂದೀಪ್ ಸಮಯ್ ಅವರು, ಕನಕದಾಸರ ಬದುಕಿನ ಕುರಿತಾದ ವಿಚಾರಗಳನ್ನು ಪ್ರಸ್ತುತ ಪಡಿಸಿದರು.
ಕನಕದಾಸರನ್ನು ಸಮಾಜ ನಡೆಸಿಕೊಂಡ ರೀತಿ, ಅವರು ತಮ್ಮ ಬದುಕಿನಲ್ಲಿ ಅನುಭವಿಸಿದ ಶೋಷಣೆ, ಅಂದು ಅಸ್ಥಿತ್ವದಲ್ಲಿದ್ದ ಜಾತಿ ಪದ್ಧತಿ ವಿರುದ್ಧದ ಹೋರಾಟದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಕನಕದಾಸರು ತಮ್ಮ ತಂದೆಯಂತೆಯೇ ದಂಡನಾಯಕನಾಗಬೇಕೆಂಬ ಬಯಕೆ ಇತ್ತಾದರೂ ಸಮಾಜದ ಆತನನ್ನು ಸಾಕಷ್ಟು ಶೋಷಣೆಗೆ ಗುರಿ ಮಾಡುತ್ತದೆ. ಹಾಗಾಗಿ ಅದರ ವಿರುದ್ಧವೇ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸುಧಾರಣೆ ತರಲು ಪ್ರಯತ್ನಪಟ್ಟ ಮಹಾನ್ ದಾರ್ಶನಿಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು. ಕಾಲೇಜಿನ ಗ್ರಂಥಪಾಲಕಿ ಡಾ. ವನಜ, ಯೋಜನಾ ವೇದಿಕೆಯ ಸಂಚಾಲಕ ಡಾ. ಸುರೇಶ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಯವಂತ ನಾಯಕ್ ಹಾಗೂ ಉಪನ್ಯಾಸಕ ಧೀರಜ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ