ಮಾದಕ ದ್ರವ್ಯ ಸೇವನೆಗೆ ಯುವ ಜನತೆ ಬಲಿಯಾಗುತ್ತಿರುವುದು ವಿಷಾದನೀಯ: ಸುಂದರ್ ರಾಜ್

Upayuktha
0



ಸುರತ್ಕಲ್: ‘ಮಾದಕ ದ್ರವ್ಯ ಸೇವನೆಗೆ ಯುವ ಜನತೆ ಬಲಿಯಾಗುತ್ತಿರುವುದು ಖೇದಕರವಾಗಿದ್ದು, ಯುವ ಜನತೆ ಜಾಗೃತರಾಗ ಬೇಕಾದ ಅವಶ್ಯಕತೆಯಿದೆ’ ಎಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಸುಂದರ್‌ ರಾಜ್ ರವರು ನುಡಿದರು. 




ಅವರು ಕರ್ನಾಟಕ ರಾಜ್ಯ ಪೊಲೀಸ್, ಮಂಗಳೂರು ನಗರ ಪೊಲೀಸ್, ಮಂಗಳೂರು ಸಂಚಾರ ಉಪ ವಿಭಾಗ, ಸಂಚಾರ ಉತ್ತರ ಪೊಲೀಸ್ ಠಾಣೆ ಹಾಗು ಆಂಟಿ ಡ್ರಗ್ಸ್ ಸೆಲ್ ಗೋವಿಂದ ದಾಸ ಕಾಲೇಜು, ಸುರತ್ಕಲ್ ಇದರ ಸಹಭಾಗಿತ್ವದಲ್ಲಿ ‘ಅಪರಾಧ ತಡೆ ಮಾಸಾಚರಣೆ 2023’ ರ ಪ್ರಯುಕ್ತ ನಡೆದ ಮಾದಕ ದ್ರವ್ಯ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.




ಸಂಚಾರ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯ ಸಬ್‍ಇನ್‍ಸ್ಪೆಕ್ಟರ್ ಆನಂದ ಮಾತನಾಡಿ ಮಾದಕ ದ್ರವ್ಯ ಸೇವನೆಯ ಚಟ ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗಿದ್ದು ಶಿಕ್ಷಣ ಸಂಸ್ಥೆಗಳು ಜಾಗೃತರಾಗಿರ ಬೇಕು ಎಂದರು.




ಸಂಪನ್ಮೂಲವ್ಯಕ್ತಿ ಸಂಚಾರ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್‍ಸ್ಪೆಕ್ಟರ್ ಕಾಂತಪ್ಪ ಮಾತನಾಡಿ ಸಾಮಾಜಿಕ ಸುಸ್ಥಿರ ವ್ಯವಸ್ಥೆಗೆ ಅಡ್ಡಿಯಾಗಿರುವ ಮಾದಕ ದ್ರವ್ಯ ಜಾಲದ ವಿರುದ್ಧ ಸಮಾಜ ಜಾಗೃತವಾಗ ಬೇಕಾಗಿದ್ದು ವಿದ್ಯಾರ್ಥಿಗಳು ಅರಿವು ಮೂಡಿಸಿಕೊಳ್ಳ ಬೇಕೆಂದರು.




ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಕ ದ್ರವ್ಯ ವಿರುದ್ಧ ಜಾಗೃತಿಗಾಗಿ ಪೊಲೀಸ್ ಇಲಾಖೆ ಮಾಡುತ್ತಿರುವ ಕಾರ್ಯವನ್ನು ಪ್ರಶಂಸೆ ವ್ಯಕ್ತ ಪಡಿಸಿದರು.




ಸಂಚಾರ ಪೊಲೀಸ್ ಠಾಣೆ ಮಂಗಳೂರು ನಗರ ಉತ್ತರದ ಸಬ್‍ಇನ್‍ಸ್ಪೆಕ್ಟರ್ ರಾಜು, ಕಾಲೇಜಿನ ದೈಹಿಕ ನಿರ್ದೇಶಕ ಮತ್ತು ಆಂಟಿ ಡ್ರಗ್ಸ್ ಸೆಲ್‍ನ ಸಂಯೋಜಕ ಡಾ.ಪ್ರಶಾಂತ್ ಎಂ, ಎಂ.ಎಸ್ಸಿ. ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು. ವೈಭವಿ ಕಾರ್ಯಕ್ರಮ ನಿರೂಪಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Advt Slider:
To Top