ಕೊಪ್ಪಳ: ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸಹಯೋಗದಲ್ಲಿ ಕಳೆದ 19 ವರ್ಷಗಳಿಂದಲೂ ಇಟಗಿ ಜಿಲ್ಲಾ ಉತ್ಸವವನ್ನು ಮಾಡುತ್ತಾ ಬಂದಿದೆ. ಬರುವ 2024 ರ ಜನವರಿ 12 ರಿಂದ 14ರ ವರೆಗೆ ಇಟಗಿ ಮಹದೇವ ದಂಡನಾಯಕ ವೇದಿಕೆಯಲ್ಲಿ 20ನೇ ಬಾರಿಗೆ ಇಟಗಿ ಉತ್ಸವವನ್ನು ನಡೆಸಲಿದೆ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ತಿಳಿಸಿದರು.
ಅವರು ಇಟಗಿ ಉತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಮಕ್ಕಳ ಸಮ್ಮೇಳನ, ಮಹಿಳಾ ಸಮ್ಮೇಳನ, ಇಟಗಿ ಜನಪದ ಜಾತ್ರೆ ಜರುಗಲಿದ್ದು, ಸಮ್ಮೇಳನದಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಕೊಪ್ಪಳ ರಾಯಚೂರು ಕಲ್ಬುರ್ಗಿ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು, ಕವಿಗಳು, ಚಿಂತಕರು ಉಪನ್ಯಾಸಕರು ಸಾಹಿತಿಗಳು ಆಗಮಿಸಿಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಬಿ.ಎಂ ಹಳ್ಳಿ ಅವರು ಮಾತನಾಡಿ, ಉತ್ಸವಕ್ಕೆ ಬರುವಂತಹ ಕಲಾವಿದರಿಗೆ ಅತಿಥಿಗಳಿಗೆ ಉಪಾಹಾರದ ವ್ಯವಸ್ಥೆಯನ್ನು ಆಸಕ್ತ ಮನಸ್ಸುಗಳು ಮಾಡುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಜಿ.ಎಸ್.ಗೋನಾಳರವರು ಪ್ರಾಸ್ತಾವಿಕವಾಗಿ ಮಾತನಾಡಿ, 900 ವರ್ಷಗಳ ಐತಿಹಾಸಿಕ ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯ ಆವರಣದಲ್ಲಿ 19 ವರ್ಷಗಳ ಕಾಲ ನಾವು ಇಟಗಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತ ಬಂದಿದ್ದೇವೆ. ಈಗಾಗಲೇ 25 ಸಾವಿರ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ, ಕವಿಗಳಿಗೆ, ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಗಿದೆ, ಅಲ್ಲದೇ ಸಾಧರಿಕರಿಗೆ ಪುರಸ್ಕಾರಗಳನ್ನು ಮಾಡಲಾಗಿದೆ.
ಈ ಐತಿಹಾಸಿಕ ಇಟಗಿ ಉತ್ಸವದ ಯಶಸ್ವಿಗೆ ದಾನಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಇಟಗಿ ಗ್ರಾಮಸ್ಥರು ಸಹಕಾರ ನೀಡುತ್ತಾ ಬಂದಿದ್ದಾರೆ. ಇಟಗಿ ಉತ್ಸವದ ಜೊತೆಗೆ ಇಟಗಿಯ ಭಾಗದಲ್ಲಿ ಕುಡಿಯುವ ನೀರು, ರಸ್ತೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪುಷ್ಕರಿಣಿ ಅಭಿವೃದ್ಧಿ ಕೆಲಸಗಳು ಶೀಘ್ರವಾಗಿ ಆಗಬೇಕಾಗಿದ್ದು ಜನಪ್ರತಿನಿಧಿಗಳು ಇತ್ತ ಕಡೆ ವಿಶೇಷವಾಗಿ ಗಮನಹರಿಸಬೇಕಿದೆ ಎಂದು ಮಾತನಾಡಿದರು. ಅಲ್ಲದೇ ನಾಗರಾಜ ಉಮಚಿಗಿ, ಎನ್.ಸಿ.ಪಣಿ, ಎಂ.ಬಿ. ಅಳವಂಡಿ, ಸೇರಿದಂತೆ ಅನೇಕರು ಸಭೆ ಕುರಿತು ಮಾತನಾಡಿದರು. ಸಭೆಯಲ್ಲಿ ಶರಣಪ್ಪ ಹಾದಿ, ರಾಮಣ್ಣ ಬಾರಕೇರ, ಉಪೇಂದ್ರ, ನಿಂಗಾ ಭಟ್ ಪೂಜಾರ, ರುದ್ರಮನಿ ಮಠಪತಿ, ಮಂಜುನಾಥ ಕೋರಿ, ಹಿರೇಲಿಂಗಣ್ಣನವರ್, ಚಿನ್ನಪ್ಪ ಗುಳಗಣ್ಣನವರ ಸೇರಿದಂತೆ ಅನೇಕರು ಇದ್ದರು. ಉಮೇಶ ಸುರ್ವೆ ಸ್ವಾಗತಿಸಿ, ಮಹೇಶ ದೊಡ್ಡಮನಿ ವಂದನಾರ್ಪಣೆ ಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ