ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜೆಮಿನಿಡ್ ಉಲ್ಕಾವೃಷ್ಠಿ ವೀಕ್ಷಣೆ

Upayuktha
0



ಉಡುಪಿ: ಪ್ರತಿ ವರ್ಷ ಡಿಸೆಂಬರ್ 14ರಂದು ಜೆಮಿನಿಡ್ ಉಲ್ಕಾವೃಷ್ಠಿಯು ಅತಿಯುತ್ತಮ ರೀತಿಯಲ್ಲಿ ಗೋಚರಿಸುವ ದಿನ. ರಾತ್ರಿ ಆಕಾಶದಲ್ಲಿ ನೂರಾರು ಉಲ್ಕೆಗಳು, ಎಲ್ಲಾ ದಿಕ್ಕಿನಲ್ಲಿ ನಾನಾ ಬಣ್ಣಗಳನ್ನು ಹೊಂದಿಕೊಂಡು ಮಿನುಗುವಂತೆ ಗೋಚರಿಸುತ್ತವೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಡಿಸೆಂಬರ್ 14ರಂದು, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವಿದ್ಯಾರ್ಥಿಗಳು ಸೇರಿ ಹಾಗು ಸಂಘದ ಹಳೆ ವಿದ್ಯಾರ್ಥಿಗಳು ಸೇರಿ, ಜೆಮಿನಿಡ್ ಉಲ್ಕಾವೃಷ್ಠಿ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಿದರು. 





ಉಲ್ಕೆಗಳು ಗೋಚರಿಸುವ ಮುನ್ನ, 7.30 ರಿಂದ ಆಕಾಶ ವೀಕ್ಷಣೆ ಯನ್ನು ಪ್ರಾರಂಭಿಸಿದರು. ದೂರದರ್ಶಕಗಳ ಮೂಲಕ, ಗುರು ಗ್ರಹ, ಶನಿ ಗ್ರಹ ಹಾಗೂ ಮಹಾವ್ಯಾಧದ ಜ್ಯೋತಿರ್ಮೇಘ (ಒರಾಯನ್ ನೆಬ್ಯುಲಾ) ವನ್ನು ವೀಕ್ಷಿಸಲಾಯಿತು. ಕಾಲೇಜಿನ 20 ವಿದ್ಯಾರ್ಥಿಗಳು, 13 ಸಿಬ್ಬಂದಿಗಳು, 3 ಹಳೆ ವಿದ್ಯಾರ್ಥಿಗಳನ್ನು ಸೇರಿಸಿ ಸುಮಾರು 60 ಮಂದಿಗಳು ಆಕಾಶ ವೀಕ್ಷಣೆ ಮಾಡಿದರು. 




9.30ರ ನಂತರ, ವಿದ್ಯಾರ್ಥಿಗಳು ಕೆಲವು ಸಿಬ್ಬಂದಿಗಳ ಜೊತೆ ಉಲ್ಕೆಗಳನ್ನು ವೀಕ್ಷಿಸಲು ಉಳಿದರು. ಬೆಳಗ್ಗೆ 2.30 ಯ ತನಕ ವೀಕ್ಷಣೆ ನಡೆಸಿದ ವಿದ್ಯಾರ್ಥಿಗಳು 70ಕ್ಕೂ ಹೆಚ್ಚು ಉಲ್ಕೆಗಳನ್ನ ಗೋಚರಿಸಿದರು. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಯಾಗಿದ್ದ, ಹಾಗೂ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎ. ಪಿ. ಭಟ್ ಮುಖ್ಯ ಅಥಿತಿಗಳಾಗಿದ್ದರು. ಇವರು ಉಲ್ಕೆಗಳು ಹಾಗೂ ಉಲ್ಕಾ ಪಾತಗಳ ಮೂಲ ಹಾಗೂ ಖಗೋಳಶಾಸ್ತ್ರವನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ.ರಾಮು ಎಲ್. ಉಪಸ್ಥಿತರಿದ್ದರು. ಸಂಘದ ವಿದ್ಯಾರ್ಥಿಗಳಾದ ಭೂಮಿಕಾ ಉಡುಪಾ, ಶರಧಿ ಹಾಗೂ ಭಾರ್ಘವ ಭಟ್ ಇವರು ದೂರದರ್ಶಕಗಳನ್ನು ಹಾಗು ವೀಕ್ಷಣಾ ಕಾರ್ಯಕ್ರಮವನ್ನು ನಿರ್ವಾಹಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top