ಹೊಡೆಯದಿದ್ರೂ ಕೇಸು ಹಾಕ್ತೀರಿ, ಹಿಂದುಗಳ ಮೇಲೆ ನಿಮ್ಮದೂ ನೈತಿಕ ಗೂಂಡಾಗಿರಿಯೆ?: ಕಾಂಗ್ರೆಸ್ ಗೆ ಡಾ.ಭರತ್ ಶೆಟ್ಟಿ ಪ್ರಶ್ನೆ

Upayuktha
0


ಕಾವೂರು: ಕಾಂಗ್ರೆಸ್ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಕೇಸು ಹಾಕಿಸುತ್ತಿದೆ. ಹಿಂದೂ ಯುವತಿಯ ಜತೆಗಿದ್ದವನನ್ನು ಕೇವಲ ವಿಚಾರಿಸಿದ ಮಾತ್ರಕ್ಕೆ ಕೇಸು ಹಾಕುವುದಾದರೆ, ನಿಮ್ಮದೂ ಹಿಂದೂಗಳ ಮೇಲೆ ನೈತಿಕ ಪೊಲೀಸ್ ಗಿರಿಯೆ ಎಂದು ಕಾಂಗ್ರೆಸ್ ಆಡಳಿತವನ್ನು  ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.



ಮೈ ಕೈ ಮುಟ್ಟದೆ ಪ್ರಶ್ನಿಸಿದರೂ ಕೇಸು, ಹೊಡೆದರೂ ಕೇಸು ಹಾಕುವುದಾದರೆ ಹಿಂದೂ ಕಾರ್ಯಕರ್ತರಿಗೆ ನೀವೇ ಪರೋಕ್ಷವಾಗಿ ಪ್ರೇರಣೆ ನೀಡುತ್ತಿದ್ದೀರಿ. ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ಹಿಂದೂ ಯುವತಿಯನ್ನು ಅನ್ಯ ಮತೀಯ ಯುವಕ ಪುಸಲಾಯಿಸಿ ಕರೆದೊಯ್ದಾಗ   ಯಾವುದೇ ಹಲ್ಲೆ ಅಥವಾ ನಿಂದನೆ ಮಾಡದೆ ವಿಚಾರಿಸಿದ್ದೇ ಮಹಾ ಅಪರಾಧ ಎಂಬಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಿ ಅವರ ಮೇಲೆ ಕೇಸು ದಾಖಲಿಸಿ ಯುವಕರ ಭವಿಷ್ಯ ಮುಸುಕಾಗಿಸುವ ಹುನ್ನಾರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ.

 

ಹಿಂದೂ ಸಮಾಜದ ಒಳಿತಿಗಾಗಿ, ನಮ್ಮ ಸಹೋದರಿಯರ ಮಾನ, ಪ್ರಾಣ ರಕ್ಷಣೆಗೆ ಮುಂದೆಯೂ ನಮ್ಮ ಪಕ್ಷ, ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ಗಡಿಪಾರು, ರೌಡಿ ಶೀಟರ್, ಅನೈತಿಕ ಪೊಲೀಸ್ ಗಿರಿಯಂತಹ ಸೆಕ್ಷನ್ ವಿಧಿಸಿ ಬೆದರಿಕೆಯ ಕೇಸ್ ಹಾಕಿದರೆ ಹೆದರಿ ಮೂಲೆ ಸೇರುತ್ತಾರೆ ಎಂಬುದು ನಿಮ್ಮ ಭ್ರಮೆ. ಅನ್ಯ ಮತೀಯರ ದುಷ್ಟ ಸಂಚನ್ನು ನಮ್ಮ ಕಾರ್ಯಕರ್ತರು ಮುಂದೆಯೂ ಬಯಲಿಗೆಳೆಯುತ್ತಾರೆ.ನಿಮ್ಮಿಂದ ಆಗುವುದಾದರೆ ತಡೆಯಿರಿ ಎಂದು ಶಾಸಕ ಡಾ.ಭರತ್ ಶೆಟ್ಟಿ ಸವಾಲು ಹಾಕಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top