ಗಗನ ಬಿ. ಅವರಿಗೆ ಡಾಕ್ಟರೇಟ್ ಪದವಿ

Upayuktha
0



ಮೂಡುಬಿದಿರೆ:  ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ  ಹಾಗೂ ಸಂಶೋಧನಾ ಕೇಂದ್ರದ ಮೊದಲ ಡಾಕ್ಟರೇಟ್  ಪದವೀಧರೆಯಾಗಿ ಗಗನ ಬಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.  




ಆಳ್ವಾಸ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಗಗನ ಬಿ ಮಂಡಿಸಿದ ‘’ಸ್ಕ್ರೀನಿಂಗ್ ಆಫ್ ಪೈಟೋಕೆಮಿಕಲ್ ಕಾನ್ಟ್ಟಿಟ್ಯೂಯೆಂಟ್ಸ್  ಆ್ಯಂಡ್ ಇವ್ಯಾಲ್ಯೇವೇಷನ್ ಆಫ್  ಆ್ಯಂಟಿಕ್ಯಾನ್ಸ್‍ರಸ್ ಪ್ರೋರ್ಪಾಟೀಸ್ ಆಫ್ ಜಿಮ್ನಾಕ್ರಾಂಥೆರಾ ಫರ್ಕೋಹೆರಿಯನಾ (ಹುಕ್. ಎಫ್ ಆ್ಯಂಡ್ ಥಾಮ್ಸ್) ವಾರ್ಬ್’’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ. 



ಮೂಲತಃ  ತರೀಕೆರೆಯವರಾದ ಇವರು  ಬಿವಿ ಬಸವರಾಜ್ ಹಾಗೂ ಹೆಚ್‍ಒ ಪ್ರಭಾವತಿ ದಂಪತಿಗಳ ಪುತ್ರಿ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ  ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ರಾಮ ಭಟ್ ಪಿ ಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. 



ಸಂಶೋಧನೆಯ ಹಂತದಲ್ಲಿ ಇವರು ಮೌಖಿಕವಾಗಿ ಪ್ರಸ್ತುತ ಪಡಿಸಿದ 6 ಅಂತರಾಷ್ಟ್ರೀಯ ಹಾಗೂ ಒಂದು ರಾಷ್ಟ್ರೀಯ ಪೇಪರ್‍ಗಳಿಗೆ ಅತ್ಯುತ್ತಮ ಪ್ರಸ್ತುತಿಯ ಗೌರವಕ್ಕೆ ಪಾತ್ರವಾಗಿದ್ದು, ಮೂರು ಸಂಶೋಧನಾ ಪೇಪರ್‍ಗಳು ಪ್ರಕಟಗೊಂಡಿವೆ.  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top