ಧರ್ಮಸ್ಥಳ: ಕೂಚಿಪುಡಿ ನೃತ್ಯದ ಮೂಲಕ ಜನರನ್ನು ಆಕರ್ಷಿಸಿದ ಸಾಂಸ್ಕೃತಿಕ ಸಂಜೆ

Upayuktha
0



ಧರ್ಮಸ್ಥಳ: ಶ್ರೀ ಕ್ಷೇತ್ರ  ಧರ್ಮಸ್ಥಳದ ಲಕ್ಷದೀಪೊತ್ಸವದ  ಅಂಗವಾಗಿ  ವಸ್ತುಪ್ರದರ್ಶನ ಸಭಾಂಗಣದಲ್ಲಿ ನಡೆಯುವ ಸಾಂಸ್ಕೃತಿಕ ಸಂಜೆಯಲ್ಲಿ ಮೊದಲನೆಯ ದಿನ ಕೂಚಿಪುಡಿ ನೃತ್ಯವು ಪ್ರದರ್ಶನಗೊಂಡಿತು. ಈ ವೇದಿಕೆಯಲ್ಲಿ ಬೆಂಗಳೂರಿನ ಗುರುರಾಜ್ ಎನ್ ಅವರ ಕೂಚಿಪುಡಿ ನೃತ್ಯ ಪ್ರದರ್ಶನವು  ನೆರೆದ ಜನರ ಮನವನ್ನು ಗೆದ್ದಿತು.  




ಈ ಕಾರ್ಯಕ್ರಮವು  ಹಂಸಧ್ವನಿ ರಾಗ ಆದಿ ತಾಳದ ಜಯ ಜಯ ಜಿತ ವೈರಿ ಭಕ್ತಿ ಪ್ರಚಂಡ ಎನ್ನುವ ಗಣೇಶ ಸ್ತುತಿಯ ಮೂಲಕ ನೃತ್ಯವನ್ನು  ಪ್ರಾರಂಭಿಸಿ, ನಂತರ  ನಟರಾಣಿ ಕೂಚಿಪುಡಿರಾಣಿ ಎನ್ನುವ ಸರಸ್ವತಿ ಸ್ತುತಿಗೆ ನೃತ್ಯಗೈದರು.  ಶಿವನ ಸ್ತುತಿಯನ್ನು ಪ್ರದರ್ಶಿಸಿದರು.  ಕೃಷ್ಣ ಲೀಲ ತರಂಗಿಣಿ ಹಾಡಿಗೆ ತಟ್ಟೆಯ ಮೇಲೆ ನಿಂತು ನರ್ತಿಸಿ ಜನರ ಮನಸ್ಸನ್ನು ಸೆಳೆದರು.




ಭಾರತೀಯ ಶಾಸ್ತ್ರೀಯ ನೃತ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದ ಈ ನೃತ್ಯವನ್ನು ಇವರು ಬೆಂಗಳೂರಿನ ವೈಜಯಂತಿ ಕಾಶಿ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಇವರು ಹಲವಾರು ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ಸಹ ನೀಡಿದ್ದಾರೆ. ಕೂಚಿಪುಡಿ ನೃತ್ಯದ ವಿಶೇಷವದ  ತಟ್ಟೆಯ ಮೇಲೆ ನಿಂತು ನರ್ತಿಸುವ ಈ ನೃತ್ಯದ ಪರಿಯು  ಶ್ರೀ ಕ್ಷೇತ್ರದ ಜನರನ್ನು  ತನ್ನತ್ತ ಸೆಳೆದಿದೆ. ಮೊದಲನೆಯ ದಿನದ ಹಲವಾರು ಕಾರ್ಯಕ್ರಮಗಳ ನಡುವೆಯೂ ಈ ನೃತ್ಯ ಪ್ರದರ್ಶನವು ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.



- ದಿವ್ಯಶ್ರೀ ಹೆಗಡೆ

ಪ್ರಥಮ ಎಂ. ಎ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top