ಸಾಂಸ್ಕೃತಿಕ ಸ್ಪರ್ಧೆ: ನಡ ಸರಕಾರೀ ಪದವಿ ಪೂರ್ವ ಕಾಲೇಜಿಗೆ ರನ್ನರ್ಸ್ ಅಪ್ ಪ್ರಶಸ್ತಿ

Upayuktha
0


ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ಮ್ಯಾನೇಜ್ ಮೆಂಟ್ ವಿಭಾಗದಿಂದ ತಾಲೂಕಿನ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ "IGNITE 2K23" ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನಡ ಸರಕಾರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.


ಏಕಪಾತ್ರಾಭಿನಯದಲ್ಲಿ ದೀಕ್ಷಿತ್, ಜಾನಪದ ಗೀತೆ ಸ್ಪರ್ಧೆಯಲ್ಲಿ ಸವಿತಾ, ರಸಪ್ರಶ್ನೆಯಲ್ಲಿ ಸುದರ್ಶನ್ ಮತ್ತು ಪವನ್, ನಿಧಿ ಶೋಧ  ಎಂಬ ವಿಶೇಷ ಸ್ಪರ್ಧೆಯಲ್ಲಿ ರಾಕೇಶ್ ಮತ್ತು ಪ್ರಾಜ್ಞೇಶ್ ದ್ವಿತೀಯ ಸ್ಥಾನ ಗಳಿಸಿ ಈ ಸಾಧನೆಯನ್ನು ಗೈದಿದ್ದಾರೆ. ಪ್ರಾಂಶುಪಾಲ ಚಂದ್ರಶೇಖರ್ ಇವರ ಮಾರ್ಗದರ್ಶನದಲ್ಲಿ, ಶ್ರೀಮತಿ ಪವಿತ್ರ ಇವರ ನೇತೃತ್ವದಲ್ಲಿ, ಎಲ್ಲಾ ಉಪನ್ಯಾಸಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.


إرسال تعليق

0 تعليقات
إرسال تعليق (0)
To Top