ನೂರು ಶಾಲೆಗಳಲ್ಲಿ ಕೋಡಿಂಗ್ ತರಬೇತಿ

Upayuktha
0



ಮಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ' (ಕೆಆರ್‌ಇಐಎಸ್)ಯ 100 ಶಾಲೆಗಳಲ್ಲಿ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮದ ಮೂಲಕ ಸುಧಾರಿತ ಕೋಡಿಂಗ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಮಾಡ್ಯೂಲ್‍ಗಳನ್ನು ಪರಿಚಯಿಸುವುದಾಗಿ ಅಮೆಜಾನ್ ಡಾಟ್‍ಇನ್ ಪ್ರಕಟಿಸಿದೆ.


ಕಂಪ್ಯೂಟರ್ ವಿಜ್ಞಾನದ ಸಾಧ್ಯತೆಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಈ ಹಿಂದಿನ ಉಪಕ್ರಮದ ಯಶಸ್ಸನ್ನು ಆಧರಿಸಿ ವಿದ್ಯಾರ್ಥಿಗಳಿಗೆ ನಿಯಂತ್ರಣ ಪರಿಸ್ಥಿತಿಗಳು, ವೇರಿಯಬಲ್‍ಗಳು ಮತ್ತು ಕಾರ್ಯಕಲಾಪಗಳಂತಹ ಸುಧಾರಿತ ಪ್ರೋಗ್ರಾಮಿಂಗ್ ಪರಿಕಲ್ಪನೆಗಳನ್ನು ಒಳಗೊಂಡ ಸಂಕೀರ್ಣ ಕಂಪ್ಯೂಟರ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಈ ವಿಸ್ತೃತ ಮಾಡ್ಯೂಲ್ ಅನುವು ಮಾಡಿಕೊಡುತ್ತದೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಮತ್ತು ಅಮೆಜಾನ್ ಜಾಗತಿಕ ಸಾರ್ವಜನಿಕ ನೀತಿಯ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಕೌನ್ಸೆಲ್ ಡೇವಿಡ್ ಜಪೋಲ್‍ಸ್ಕೈ ಹೇಳಿದ್ದಾರೆ.


ಇದರ ಜತೆಗೆ 30 'ಕೆಆರ್‌ಇಐಎಸ್' ಶಾಲೆಗಳಿಗೆ ಡಿಜಿಟಲ್ ಮೂಲಸೌಕರ್ಯ ಸುಧಾರಣೆಯನ್ನು ಸಹ ಒದಗಿಸುತ್ತದೆ. ಈ ವಿಸ್ತರಣೆಯಿಂದ ರಾಜ್ಯದ 30 ಜಿಲ್ಲೆಗಳಲ್ಲಿ 6 ರಿಂದ 8 ನೇ ತರಗತಿಯಲ್ಲಿ ಕಲಿಯುತ್ತಿರುವ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಲಿದೆ.


ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಸಹಯೋಗದಲ್ಲಿ ಈ ಉಪಕ್ರಮ ಹಮ್ಮಿಕೊಂಡಿದ್ದು, ಪ್ರಾಜೆಕ್ಟ್ ಆಧಾರಿತ ಕಲಿಕೆಯ ಮೂಲಕ, ವಿದ್ಯಾರ್ಥಿಗಳಿಗೆ 'ಎಐ'ನ ಮೂಲಭೂತ ಅಂಶಗಳನ್ನು ಅದರ ಪ್ರಸ್ತುತತೆ, ಭವಿಷ್ಯದ ಸಾಧ್ಯತೆಗಳು ಮತ್ತು ಸುತ್ತಮುತ್ತಲ ಪ್ರಪಂಚದ ಮೇಲೆ ಪರಿಣಾಮದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top