ಸಿಂಧನೂರು (ರಾಯಚೂರು ಜಿಲ್ಲೆ): ದೇಶದ ಪ್ರತಿಯೊಬ್ಬ ಪ್ರಜೆಯು ಸಮಾನತೆ, ಸಹಬಾಳ್ವೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ದಿಂದ ಜೀವನ ನಡೆಸಲು ರಚಿಸಿದ ಮಹಾ ಗ್ರಂಥವೇ ಭಾರತದ ಸಂವಿಧಾನ. ಇಂತಹ ಸಂವಿಧಾನವನ್ನು ರಚಿಸಿದ ಮಹಾ ನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 67ನೇ ಮಹಾ ಪರಿನಿರ್ವಾಣ ದಿನದಂದು ನಾವು ನೀವು ಅವರ ಆದರ್ಶ, ತತ್ವಗಳ ಅಡಿಯಲ್ಲಿ ನಡೆಯೋಣ ಎಂದು ತಹಶಿಲ್ದಾರ ಅರುಣ ಕುಮಾರ ದೇಸಾಯಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವೆಂಕಟ್ ರಾವ್ ನಾಡಗೌಡ, ಕಾಂಗ್ರೆಸ್ ಮುಖಂಡ ರಾದ ಪಂಪನಗೌಡ, ಶಿವನ ಗೌಡ ಗೋರೆಬಾಳ, ಖಾಜಿಮಲ್ಲಿಕ್, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ. ವಿವಿಧ ಸಂಘಟನೆಯ ನಾಯಕರಾದ ಮೌನೇಶ ದೊರೆ, ಹುಸೇನಪ್ಪ ಗುಡಿ, ಎಸ್.ಎನ್. ವೀರೇಶ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ