ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಹೃದಯ ಪುನಶ್ಚೇತನ ಕಾರ್ಯಾಗಾರ

Upayuktha
0



ಹೊಸಂಗಡಿ: ಹೃದಯ ಸ್ತಂಭನ ಆದಾಗ ತಕ್ಷಣವೇ ಸ್ಪಂದಿಸಿ, ಹೃದಯ ಪುನಶ್ಚೇತನಗೊಳಿಸಬೇಕು. ಇದಕ್ಕೆ ಸೂಕ್ತವಾದ ತರಬೇತಿ ಪ್ರತಿಯೊಬ್ಬರೂ ಪಡೆಯಬೇಕು. ಅವಘಡಗಳಾದಾಗ ಎಲ್ಲಡೆ ಎಲ್ಲಾ ಕಾಲದಲ್ಲಿ ವೈದ್ಯರು ಲಭಿಸುವುದು ಸಾಧ್ಯವಿಲ್ಲ. ಈ ಕಾರಣದಿಂದ ತುರ್ತು ಸಂದರ್ಭಗಳಲ್ಲಿ ವೈದ್ಯರು ಬರುವವರೆಗೆ ಅಥವಾ ಆಸ್ಪತ್ರೆಗೆ ಸಾಗಿಸುವವರೆಗೆ ರೋಗಿಯ ಪ್ರಾಣ ಉಳಿಯುವಂತೆ ನೋಡಿಕೊಳ್ಳಬೇಕು. ಈ ಕಾರಣದಿಂದ ಪ್ರತಿಯೊಬ್ಬರಿಗೂ ಹೃದಯ ಪುನಶ್ಚೇತನ ತರಬೇತಿ ಅತೀ ಅಗತ್ಯ ಎಂದು ಎ.ಜೆ. ಆಸ್ಪತ್ರೆಯ ಖ್ಯಾತ ಸರ್ಜನ್ ಡಾ|| ಕಿಶನ್ ರಾವ್ ಬಾಳಿಲ ನುಡಿದರು. 




ಅವರು ಡಿ. 29  ಶುಕ್ರವಾರದಂದು ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ದಂತ ಚಿಕಿತ್ಸಾಲಯದ ಶುಶ್ರೂಶಕಿಯರಿಗೆ ಮತ್ತು ವೈದ್ಯರಿಗೆ ಒಂದು ದಿನದ ಹೃದಯ ಪುನಶ್ಚೇತನ ಕಾರ್ಯಾಗಾರ ನಡೆಯಿತು.




 ಡಾ|| ಕಿಶನ್‍ರಾವ್ ಬಾಳಿಲ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡದರು. ದಂತ ಚಿಕಿತ್ಸಾಲಯದ ವೈದ್ಯರಾದ ಡಾ|| ಮುರಲಿ ಮೋಹನ ಚೂಂತಾರು ಮತ್ತು ಡಾ|| ರಾಜಶ್ರೀ ಈ ಕಾರ್ಯಾಗಾರಕ್ಕೆ ಸಹಕಾರ ನೀಡಿದರು. ಡಾ|| ಅಂಜಲಿ, ಚೈತ್ರ, ರಮ್ಯ, ಸುಶ್ಮಿತಾ ಮತ್ತು ಜಯಶ್ರೀ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದರು. ಡಾ|| ಮುರಲಿ ಮೋಹನ ಚೂಂತಾರು ಸ್ವಾಗತಿಸಿದರು ಮತ್ತು ಡಾ|| ರಾಜಶ್ರೀ ವಂದಿಸಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ಈ ಕಾರ್ಯಾಗಾರ  ನಡೆಯಿತು.ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ನಿರಂತರವಾಗಿ ಈ ಕಾರ್ಯಾಗಾರ ನಡೆಯುತ್ತಿದೆ ಮತ್ತು ರೋಗಿಗಳ ಸೇವೆಯಲ್ಲಿ ಮುಂಚೂಣಿಯಲ್ಲಿದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top