ಬ್ರ್ಯಾಂಡ್ ಮಂಗಳೂರು ವಾಕಥಾನ್ ಜನತೆಯ ಸಹಭಾಗಿತ್ವದಲ್ಲಿ ಸಮೃದ್ಧ ಮಂಗಳೂರು

Upayuktha
0

 ಮೇಯರ್ ಸುಧೀರ್ ಶೆಟ್ಟಿ ಆಶಯ



ಮಂಗಳೂರು: ಸ್ವಚ್ಛತೆ ಹಾಗೂ ಸೌಹಾರ್ದತೆ ನಗರದ ಅಭಿವೃದ್ದಿಗೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವ ಅವಶ್ಯ ವಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು. 


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಅಂಗವಾಗಿ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತ ರ ಸಂಘದ  ವತಿಯಿಂದ  ಭಾನುವಾರ ಆಯೋಜಿಸಲಾದ ಬ್ರ್ಯಾಂಡ್ ಮಂಗಳೂರು ವಾಕಥಾನ್ ಗೆ ನಗರದ ಕುದ್ಮುಲ್ ರಂಗರಾವ್  ಪುರಭವನದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಸಮೃದ್ಧ ಮಂಗಳೂರು  ಸಾಕಾರಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

 

ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,  ಮಂಗಳೂರು ವಿಶ್ವ ವಿದ್ಯಾನಿಲಯ ದ ಎನ್ ಎಸ್‌ ಎಸ್  ಯೋಜ ನಾಧಿಕಾರಿ ಡಾ.ನಾಗರತ್ನ,ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಇಂಜಿನಿಯರ್ ಚಂದ್ರಶೇಖರಯ್ಯ ಕೆ.ಟಿ, ಮಂಗಳೂರು ಸ್ಮಾರ್ಟ್ ಸಿಟಿ ಮಹಾ ಪ್ರಬಂಧಕ  ಅರುಣ್ ಪ್ರಭಾ, ಗ್ರಾಮೀಣ ವಿಕಾಸ ಯೋಜನೆಯ ನೋಡಲ್ ಅಧಿಕಾರಿ ತುಕಾರಾಮ ಗೌಡ,    ಎನ್ ಎಸ್ ಎಸ್  ಸೈಂಟ್ ಆಗ್ನೆಸ್  ಕಾಲೇಜು ಘಟಕದವ ಸಂಯೋಜಕ ಉದಯ ಕುಮಾರ್, ಕೆನರಾ ಕಾಲೇಜಿನ ಸಂಯೋಜಕರಾದ  ರವಿಪ್ರಭ,ಬೆಸೆಂಟ್ ಕಾಲೇಜಿನ ಸೀಮಾ ಪ್ರಭು,ಕೀರ್ತನಾ ಭಟ್, ಜಿಲ್ಲಾ ಪತ್ರ ಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್,ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ  ಸದಸ್ಯ ರೇಮಂಡ್ ತಾಕೊಡೆ, ರೆಡ್ ಕ್ರಾಸ್ ನಿರ್ದೇಶಕ ರವೀಂದ್ರನಾಥ ಉಚ್ಚಿಲ್, ವಿಭಾನಾಯಕ್  ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.


ದ.ಕ.ಜಿಲ್ಲಾಡಳಿತ, ಮಂಗಳೂರು ಮಹಾ ನಗರ ಪಾಲಿಕೆ,  ಮಂಗಳೂರು ಸ್ಮಾರ್ಟ್ ಸಿಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ,  ಪೊಲೀಸ್ ಆಯುಕ್ತರ  ಕಾರ್ಯಾಲಯ, ಮಂಗಳೂರು ವಿ.ವಿ.ಎನ್ ಎಸ್ ಎಸ್ ಘಟಕದ ಸಹಭಾಗಿತ್ವದಲ್ಲಿ  ವಾಕಥಾನ್ ನಡೆಯಿತು. ನಗರದ ಮೈದಾನ್ ರಸ್ತೆ- ಸ್ಟೇಟ್ ಬ್ಯಾಂಕ್- ಹಂಪನಕಟ್ಟೆ ರಸ್ತೆ ಮೂಲಕ ಸಾಗಿ ಬಂದ ವಾಕಥಾನ್ ನಲ್ಲಿ ವಿದ್ಯಾರ್ಥಿಗಳು ಸ್ಚಚ್ಚತೆ ಬಗ್ಗೆ ಅರಿವು ಮೂಡಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top