ಕು|| ದಿಯಾ ಉದಯ್ ಭರತನಾಟ್ಯ ರಂಗಪ್ರವೇಶ, ಕಲಾಸಕ್ತರಿಂದ ಆಸ್ವಾದನೆ

Upayuktha
0


ಬೆಂಗಳೂರು: ರಂಗಪ್ರವೇಶ ಎನ್ನುವುದು ಭರತನಾಟ್ಯದ ಉದಯೋನ್ಮುಖ ಕಲಾವಿದರಿಗೆ ಅತ್ಯಂತ ಮಹತ್ವದ ಕ್ಷಣ. ಅಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದರೂ ಕೂಡಾ ರಂಗಪ್ರವೇಶದ ಸಮಯದಲ್ಲಿ ವೇದಿಕೆಯಲ್ಲಿ ತನ್ನ ನಾಟ್ಯ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಒರೆಗೆ ಹಚ್ಚುವಂತಹ ಸನ್ನಿವೇಶ. ಇಂಥ ಸಂದರ್ಭದಲ್ಲಿ ರಂಗದಲ್ಲಿ ಸೊಗಸಾಗಿ ನಾಟ್ಯಾಭಿನಯಗೈದು ಕಲಾವಿದೆಯಾಗಿ ಬೆಳೆಯುವ ಭರವಸೆ ಮೂಡಿಸಿದ್ದಾರೆ ಕು|| ದಿಯಾ ಉದಯ್.



ಈ ಉದಯೋನ್ಮುಖ ಕಲಾವಿದೆಯ ರಂಗಪ್ರವೇಶಕ್ಕೆ ಡಿಸೆಂಬರ್ 2ರಂದು ವಯ್ಯಾಲಿಕಾವಲ್ ನಲ್ಲಿರುವ ಚೌಡಯ್ಯ ಸ್ಮಾರಕ ಭವನ ಸಜ್ಜುಗೊಳಿಸಲಾಗಿತ್ತು. ಪಕ್ಕದಲ್ಲಿ ಹಿಮ್ಮೇಳದ ಹೆಸರಾಂತ ಕಲಾವಿದರು ಹಾಗೂ ಎದುರಿನಲ್ಲಿ ಸಭಾಂಗಣದ ತುಂಬಾ ಗಣ್ಯರನ್ನು ಒಳಗೊಂಡು ಕಿಕ್ಕಿರಿದು ಸೇರಿದ್ದ ದೊಡ್ಡ ಸಮೂಹವೇ ಪ್ರತಿಭಾನ್ವಿತೆಯೊಬ್ಬಳ ನಾಟ್ಯ ಕಲಾ ಪ್ರದರ್ಶನ ವೀಕ್ಷಿಸುವುದಕ್ಕೆ ಕಾತರದಿಂದ ಸೇರಿತ್ತು.



ಶೃಂಗೇರಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿಯೇ ವಾಸವಾಗಿರುವ ಉದ್ಯಮಿ ಶ್ರೀ ಉದಯಕುಮಾರ್ ಮತ್ತು ಶ್ರೀಮತಿ ಧನಲಕ್ಷ್ಮಿ ದಂಪತಿಗಳ ಜೇಷ್ಠ ಪುತ್ರಿ ಕು|| ದಿಯಾಳಿಗೆ ಮೂರನೇ ವಯಸ್ಸಿನಲ್ಲೇ  ನೃತ್ಯದಲ್ಲಿ ಆಸಕ್ತಿ ಇರುವುದನ್ನು ಗಮನಿಸಿ ಆಗಿನಿಂದಲೇ ಮಗುವನ್ನು ಪ್ರೋತ್ಸಾಹಿಸಲು ಪ್ರಾರಂಭಿಸಿದರು. ನೃತ್ಯ ಹೇಳಿಕೊಡುವ ಗುರುಗಳನ್ನು ಹುಡುಕಲು ಪ್ರಾರಂಭಿಸಿದಾಗ ದೊರೆತವರೇ ಪ್ರಸಿದ್ಧ ನಾಟ್ಯ ಶಾಲೆಯಾದ ಸಾಯಿ ಆಟ್ಸ್೯ ಇಂಟರ್ನ್ಯಾಷನಲ್ ಸಂಸ್ಥೆಯ 'ಕರ್ನಾಟಕ ಕಲಾಶ್ರೀ' ಡಾ|| ಸುಪರ್ಣ ವೆಂಕಟೇಶ್. ಇವರ ನಿರ್ದೇಶನದಲ್ಲಿ ಕು|| ದಿಯಾ ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದರು.



ಅತಿ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಕಾರ್ಯಕ್ರಮಗಳನ್ನು ನೀಡಿ, ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಕು|| ದಿಯಾ.

ಕು|| ದಿಯಾ ಗುರುಗಳಿಗೆ, ಹಿಮ್ಮೇಳದ ಕಲಾವಿದರಿಗೆ ನಮಸ್ಕರಿಸಿ, ಮೊದಲಿಗೆ "ಪುಷ್ಪಾಂಜಲಿ" (ರಾಗ: ಗೌಳ, ತಾಳ: ಮಿಶ್ರಛಾಪು, ರಚನೆ: ಶ್ರೀ ಮುತ್ತುಸ್ವಾಮಿ ದೀಕ್ಷಿತರು)ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, "ಜತ್ತಿಸ್ವರ" (ರಾಗ: ಕನ್ನಡ, ತಾಳ: ರೂಪಕ), "ಶೃಂಗೇರಿ ಪುರದೇಶ್ವರಿ ಶಾರದೆ" (ರಾಗ: ಕಲ್ಯಾಣಿ, ತಾಳ: ಆದಿ, ರಚನೆ: ಶ್ರೀ ಪದ್ಮಚರಣ್), "ವರ್ಣಂ-ಕರುಣೈ ನೀ" (ರಾಗ: ನಾಟಕುರಂಜಿ, ತಾಳ: ಆದಿ, ರಚನೆ: ದಂಡಾಯುಧಪಾಣಿ ಪಿಳ್ಳೈ), "ಶೃಂಗಾರ ಲಹರಿ" (ರಾಗ: ನೀಲಾಂಬರಿ, ತಾಳ: ಆದಿ), "ರಾಧಿಕಾ ತನವಿರಹೆ" (ರಾಗ: ವಾಸಂತಿ, ತಾಳ: ಆದಿ, ರಚನೆ: ಶ್ರೀ ಜಯದೇವ), "ಮೋಹನ ಕಲ್ಯಾಣಿ ತಿಲ್ಲಾನ" (ರಾಗ: ಮೋಹನ ಕಲ್ಯಾಣಿ, ತಾಳ: ಆದಿ, ರಚನೆ: ಶ್ರೀ ಲಾಲ್ಗುಡಿ ಜಯರಾಂ), ಈ ಕೃತಿಗಳಿಗೆ ನರ್ತಿಸಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. 



ಹಿಮ್ಮೇಳದಲ್ಲಿ: ಗುರು. ಡಾ|| ಸುಪರ್ಣ ವೆಂಕಟೇಶ್ (ನಾಟುವಾಂಗಮ್), ವಿ|| ಬಾಲಸುಬ್ರಮಣ್ಯ ಶರ್ಮಾ (ಗಾಯನ), ವಿ|| ಭವಾನಿ ಶಂಕರ್ (ಮೃದಂಗ), ವಿ|| ವಿವೇಕ್ ವಿ. ಕೃಷ್ಣ (ಕೊಳಲು), ವಿ|| ಪ್ರಾದೇಶಾಚಾರ್ (ಪಿಟೀಲು) ಮತ್ತು ವಿ|| ಡಿ.ವಿ. ಪ್ರಸನ್ನಕುಮಾರ್ (ರಿದಂಪಾಡ್) ವಾದ್ಯಗಳಲ್ಲಿ ಸಹಕಾರ ನೀಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶರತ್ ಟಿ. ಎಸ್. ಮತ್ತು ಶ್ರೀಮತಿ ಅನುಷಾ ಭಾಗವತ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top