ಬೆಂಗಳೂರು: ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಗಾಂಧಿಭವನದ ಶ್ರೀ ಮೈಲಾರ ಮಹಾದೇವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
'ಗಾಂಧೀಜಿ ಮತ್ತು ಅಂಬೇಡ್ಕರ್ ಪ್ರಸ್ತುತತೆ' ವಿಷಯದ ಕುರಿತು ದತ್ತಿ ಉಪನ್ಯಾಸವನ್ನು ಹಿರಿಯ ವಿದ್ವಾಂಸ ಮತ್ತು ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ.ಪೋತೆ ನೀಡಿ ಮಾತನಾಡುತ್ತ ಈ ಜಗತ್ತು ಕಂಡ ಇಬ್ಬರು ಮಹಾನ್ ವ್ಯಕ್ತಿತ್ವವಾಗಿ, ಭೌತಿಕವಾಗಿ ಎರಡು ಹಿರಿಯ ಚೇತನ ಕಣ್ಮರೆಯಾಗಿದ್ದರು ಅವರು ಪ್ರತಿಪಾದಿಸಿದ ವಿಚಾರಧಾರೆ ಇಂದಿಗೂ ನಮಗೆಲ್ಲ ಮಾರ್ಗದರ್ಶಿಯಾಗಿದೆ . ವಿಚಾರ ಭಿನ್ನಾಭಿಪ್ರಾಯಷ್ಟೇ ವಿನಃ ಗುರಿ ಒಂದೇ ಆಗಿ ದಲಿತೋದ್ದಾರಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ . ಭಾರತದ ಹೊರಗಿನ ಜಗತ್ತಿಗೆ ಬುದ್ಧ - ಬಸವ – ಗಾಂಧಿ –ಅಂಬೇಡ್ಕರ್ ಹತ್ತಿರವಾದಷ್ಟು ನಮ್ಮ ನೆಲದಲ್ಲಿ ಆಗದಿರುವುದು ವಿಷಾದನೀಯ. ಒಬ್ಬರು ಬೆಟ್ಟದ ತುದಿಯಿಂದ ಕೆಳಗಿದು ಬಂದು ಜನಸೇವೆಯಲ್ಲಿ ತೊಡಗಿದರೆ ಮತ್ತೊಬ್ಬರು ಕೆಳಸ್ತರದಿಂದ ಮೇಲಕ್ಕೇರಿ ಸ್ವಾತಂತ್ಯ- ಸಂವಿಧಾನದ ಮೂಲಕ ದೇಶ ಕಟ್ಟುವ ವಹಿಸಿದ ಪಾತ್ರ ಹಿರಿದಾದದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ. ವೂಡೇ.ಪಿ. ಕೃಷ್ಣ ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಂಡಿದ್ದರೆ ಭಾರತ ಎಂದೋ ವಿಶ್ವಗುರುವಾಗುತಿತ್ತು ಅದರೇ ಹಾಗೆ ಆಗಲಿಲ್ಲ ; ಸುಸಂಸ್ಕøತ ಸಮಾಜ ಒಂದಾಗಲು ಪೂರ್ವಾಗ್ರಹ ಪೀಡಿತರಾಗದೆ ಯುವ ಜನತೆ ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಯನ್ನು ಅಧ್ಯಯನ ಮಾಡಿ ತನ್ಮೂಲಕ ವಿಚಾರ ದರ್ಶನದಿಂದ ವ್ಯಕ್ತಿತ್ವ ತಿಳಿಯುತ್ತದೆ ಎಂದು ತಿಳಿಸಿದರು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಎಂ.ಸಿ ನರೇಂದ್ರ , ದತ್ತಿ ದಾನಿಗಳ ಪ್ರತಿನಿಧಿ ಡಬ್ಲೂ ಡಿ.ಅಶೋಕ್ , ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸತ್ಯಮಂಗಲ ಮಹಾದೇವ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್ ಗೌ.ಖಜಾಂಚಿ ಸಿಸಿರಾ ಉಪಸ್ಥಿತರಿದ್ದರರು.
ಬ್ರಹ್ಮ ಸಮಾಜದ ನಾಯಕ ಮತ್ತು ಗಾಂಧಿವಾದಿ ಡಬ್ಲ್ಯೂ.ಎಚ್. ಹನುಮಂತಪ್ಪ
ರಾಜಾರಾಮ ಮೋಹನ್ರಾಯ್ ಹಾಗೂ ಮಹಾತ್ಮಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಪ್ರೇರಿತರಾಗಿದ್ದ ಶ್ರೀ ಹನುಮಂತಪ್ಪ ಅವರು ಹಿಂದಿನ ಮೈಸೂರುರಾಜ್ಯದ ಮುಂಚೂಣಿ ರಾಷ್ಟ್ರೀಯ ನಾಯಕರಾಗಿದ್ದರು. ಅವರು 1920ರಲ್ಲಿ ಬೆಂಗಳೂರು ಸಿಟಿ ಮುನ್ಸಿಪಲ್ಕೌನ್ಸಿಲ್ನ ಕೌನ್ಸಿಲರ್ ಆಗಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ನಗರದ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ ವಿಶಿಷ್ಟ ಹಿರಿಮೆ ಅವರದು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮೈಸೂರು ಕಾಂಗ್ರೆಸ್ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಚಟುವಟಿಕೆಗಳ ಹಿಂದೆ ಚಲಿಸುವ ಸ್ಪೂರ್ತಿಯಾಗಿದ್ದರು.
ಅವರು 1941 ರಲ್ಲಿ ಬೆಂಗಳೂರು ನಗರ ಪುರಸಭೆಯ ಮೊದಲ ಚುನಾಯಿತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಮತ್ತು ಮೈಸೂರು ಪ್ರತಿನಿಧಿ ಸಭೆ (1923-1948), ಮೈಸೂರು ಸಂವಿಧಾನ ಸಭೆ (1949) ಮತ್ತು ವಿಧಾನಸಭೆಯ ಸದಸ್ಯರಾಗಿದ್ದರು. ಗಾಂಧೀವಾದಿಯಾದ ಶ್ರೀಯುತರು ರಚನಾತ್ಮಕ ಕೆಲಸದಲ್ಲಿ ದೃಢವಾದ ನಂಬಿಕೆಯುಳ್ಳವರಾಗಿದ್ದರು. ಮೈಸೂರು ರಾಜ್ಯ ವಯಸ್ಕ ಶಿಕ್ಷಣ ಪರಿಷತ್ತು, ಠಕ್ಕರ್ಬಾಪಾ ಹರಿಜನ ಬಾಲಕಿಯರ ಹಾಸ್ಟೆಲ್ ಮತ್ತು ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರಂ, ಈ ಪ್ರಮುಖ ಸಂಸ್ಥೆಗಳ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ದೂರದೃಷ್ಟಿಯ ಶಿಕ್ಷಣತಜ್ಞರಾಗಿ ಬೆಂಗಳೂರಿನ ಆರ್ಯವಿದ್ಯಾ ಶಾಲೆ, ಗಾಂಧಿನಗರ ಹೈಸ್ಕೂಲ್, ಎಂ.ಇ.ಎಸ್.ಕಾಲೇಜು ಮತ್ತು ಬ್ರಹ್ಮಸಮಾಜ ಬಾಲಕಿಯರ ಸ್ಕೂಲ್ನಂತಹ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಿದ್ದರು. ಅವರು ಬ್ರಹ್ಮಸಮಾಜದ ತತ್ತ್ವಗಳು ಮತ್ತು ಜೀವನ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಕರ್ನಾಟಕದಲ್ಲಿ ಬ್ರಹ್ಮಸಮಾಜದ ಬೆಂಗಳೂರಿನ ಅಧ್ಯಕ್ಷರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ.
ಗಾಂಧೀ ಶಾಂತಿ ಪ್ರತಿಷ್ಠಾನ, ಬೆಂಗಳೂರು ಕೇಂದ್ರದ ವತಿಯಿಂದ ಡಬ್ಲ್ಯು, ಹೆಚ್. ಹನುಮಂತಪ್ಪನವರ ಸ್ಮರಣಾರ್ಥ ಪ್ರತೀವರ್ಷ ಡಿಸೆಂಬರ್ 24 ರಂದು ಸಾರ್ವಜನಿಕ ಮಹತ್ವದ ವಿಷಯದ ಕುರಿತು ವಾರ್ಷಿಕ ಉಪನ್ಯಾಸವನ್ನು ಅದರ ದತ್ತಿ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗುತ್ತಿದೆ.
ವಿವರಗಳಿಗೆ ಸಂಪರ್ಕಿಸಿ : 97409 41126
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ