ಪ್ರೇಕ್ಷಕರ ಓನ್ಸ್ ಮೋರ್ ಪ್ರತಿಕ್ರಿಯೆ ನಟನಿಗೆ ಡಬಲ್ ಸ್ಫೂರ್ತಿ: ಗೊರೂರು ಅನಂತರಾಜು

Upayuktha
1 minute read
0



ಹಾಸನ: ಅಂದು ನಾಟಕ ಕಂಪನಿಗಾಗಿ  ಬಿ.ಪುಟ್ಟಸ್ವಾಮಯ್ಯನವರು ಬರೆದ ಕುರುಕ್ಷೇತ್ರ, ಬೆಳ್ಳಾವೆ ನರಹರಿ ಶಾಸ್ತ್ರಿಗಳ ರಾಮಾಯಣ ಮೈಸೂರು ಭಾಗದಲ್ಲಿ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿವೆ. ಇದಕ್ಕೆ ನಾಟಕದ ಹಾಡುಗಳೇ ಪ್ರಮುಖ ಕಾರಣ.  ಹಳ್ಳಿಗಾಡಿನಲ್ಲಿ ಅಷ್ಟೇ ಅಲ್ಲಾ   ಪಟ್ಟಣಗಳಲ್ಲೂ ಜೀವಂತಿಕೆ ಜನಪ್ರಿಯತೆಗೆ  ನಾಟಕ ಕಲಿಸುವ ಮೇಷ್ಟ್ರುಗಳು ಪಾತ್ರವೂ ಇದೆ. ಸನ್ನಿವೇಶಗಳಿಗೆ ಪೂರಕವೆಂಬಂತೆ ತಾವೇ ಹೊಸ ಹೊಸ ಹಾಡುಗಳನ್ನು ತುರುಕಿ ಪ್ರೇಕ್ಷಕರ ಮನ ಗೆಲ್ಲಲು ಹೆಣಗಾಡುತ್ತ್ತಾರೆ. ಈ ನಾಟಕಗಳು ಜನಮನ ಸೆಳೆಯುತ್ತಾ ಬಂದಿರುವಲ್ಲಿ ನಟರು ಮತ್ತು ನಿರ್ದೇಶಕರು ಇಬ್ಬರ ಪಾತ್ರವು ಮಹತ್ವದು  ಎಂದು  ಸಾಹಿತಿ ಗೊರೂರು ಅನಂತರಾಜು ಅಭಿಪ್ರಾಯಪಟ್ಟರು. 




ಭಾನುವಾರ ಹಾಸನದ ಕಲಾಭವನದಲ್ಲಿ  ಹಾಸನಾಂಬ ಕೃಪಾ ಪೋಷಿತ ನಾಟಕ ಮಂಡಳಿ ಶ್ರೀ ಶನೇಶ್ವರ ಕಲಾಸಂಘದ ಕಲಾವಿದರು ಪ್ರದರ್ಶಿಸಿದ  ಕುರುಕ್ಷೇತ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿ ಹಿಂದೆಲ್ಲಾ ಡಿಸೆಂಬರ್ ಜನವರಿ ತಿಂಗಳು ದನಗಳ ಜಾತ್ರೆ ಸಂದರ್ಭ ಹಾಸನದ ವಸ್ತು ಪ್ರದರ್ಶನ ನಾಟಕ ಸಂಗೀತ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮನರಂಜನಾ ವೇದಿಕೆಯಾಗಿತ್ತು ಎಂದ ಗೊರೂರು ಅನಂತರಾಜು ಕಂಪನಿ ನಾಟಕಗಳು ಕಲಾಭವನದ ಆವರಣದಲ್ಲಿ ಕ್ಯಾಂಪ್ ಮಾಡಿ ನಾಟಕಗಳನ್ನು ಪ್ರದರ್ಶಿಸಿ ರಂಜಿಸುತ್ತಿದ್ದವು. ಈಗಲೂ ಅದೇ ವೈಭವ ಮರುಕಳಿಸುವಂತೆ ಸ್ಥಳೀಯ ಕಲಾತಂಡಗಳು ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮನ ತಣಿಸಲು ಶ್ರಮಿಸುತ್ತಿವೆ. ಪ್ರೇಕ್ಷಕರು ನಟನೆ ಮೆಚ್ಚಿ ಚಪ್ಪಾಳೆ ತಟ್ಟಿದರೆ ನಟನಿಗೆ ಹಾಲು ಕುಡಿದಷ್ಟೇ ಸಂತೋಷ  ಹಾಡು ಮೆಚ್ಚಿ ಒನ್ಸ್ ಮೋರ್ ಎಂದರೆ  ಡಬಲ್ ಸ್ಫೂರ್ತಿ ಎಂದರು.   




ನಟ ನಿರ್ದೇಶಕ ಎ.ಸಿ. ರಾಜು ಉದ್ಭಾಟಿಸಿ ಮಾತನಾಡಿ  ಪೌರಾಣಿಕ ನಾಟಕ ನಿರ್ದೇಶನದಲ್ಲಿ ಹೆಸರು ಮಾಡಿದ್ದ ದಿವಂಗತ ದೊಡ್ಡಗೇಣಿಗೆರೆ ರಂಗಪ್ಪದಾಸ್‍ರ ಸ್ಮರಣಾರ್ಥ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರು ಮಂಗಳವಾರ ಪ್ರಚಂಡ ರಾವಣ ನಾಟಕ  ಪ್ರದರ್ಶಿಸುತ್ತಿದ್ದು ಪ್ರೇಕ್ಷಕರು ನಾಟಕ ನೋಡಿ ಪ್ರೋತ್ಸಾಹಿಸಿ ಹಿರಿಯ ನಿರ್ದೇಶಕರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಕೋರಿದರು. 




ನಟ ಡಿ.ವಿ.ನಾಗಮೋಹನ ಮಾತನಾಡಿ ನಾಟಕ ಪ್ರದರ್ಶನ ಖರ್ಚು ಲಕ್ಷಗಟ್ಟಲೇ ಬರುತ್ತಿದ್ದು ನಿರ್ದೇಶಕರು ತಮ್ಮ ಸಂಭಾವನೆ ಕಡಿಮೆ ಮಾಡಿ ಕಲಾತಂಡಗಳಿಗೆ ನೆರವಾಗಲು ಕೋರಿದರು. ಡಾಕ್ಟರ್ ಪ್ರದೀಪ್, ನಿರ್ದೇಶಕ ವೀರಭದ್ರಾಚಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಆರ್. ಸೋಮರಾಜ್ ಪ್ರಾರ್ಥಿಸಿದರು. ಕಲಾವಿದರು ಪ್ರದರ್ಶಿಸಿದ ಕುರುಕ್ಷೇತ್ರ ನಾಟಕ ಪ್ರೇಕ್ಷಕರ ಮನ ಸೆಳೆಯಿತು.  




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

                        


Post a Comment

0 Comments
Post a Comment (0)
To Top