ನಿಟ್ಟೆ ಕ್ರೀಡಾಪಟುಗಳ ಸಾಧನೆ

Upayuktha
0



ಕಾರ್ಕಳ: ಉಡುಪಿಯ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯು ಉಡುಪಿ ಜಿಲ್ಲಾ ಮಟ್ಟದ ಸೈಂಟ್ ಮೇರೀಸ್ ರೂಬಿ ರನ್-2023 ಕಾರ್ಯಕ್ರಮವನ್ನು ಡಿ.3 ರಂದು ಹಮ್ಮಿಕೊಂಡಿತ್ತು. 




13 ಕಿ.ಮೀ ಓಟ ಬಾಲಕಿಯರ ವಿಭಾಗದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ ಚಿನ್ನದ ಪದಕ ಹಾಗೂ ಭೂಮಿಕಾ ಬೆಳ್ಳಿ ಪದಕ ಪಡೆದಿರುವರು. 13 ಕಿ.ಮೀ ಬಾಲಕರ ವಿಭಾಗದಲ್ಲಿ ಡಾ. ಎನ್.ಎಸ್.ಎ.ಎಂ ಪಿಯು ಕಾಲೇಜಿನ ಆದಿತ್ಯ 4ನೇ ಸ್ಥಾನ, ರಾಜೇಂದ್ರ 5ನೇ ಸ್ಥಾನ ಪಡೆದಿದ್ದಾರೆ. 




ಡಾ.ಎನ್ಎಸ್ಎಎಂ ಪಿಯು ಕಾಲೇಜಿನ ನಂದಿನಿ ಜಿ, 5 ಕಿ.ಮೀ ಓಟದ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಬಾಲಕರ ವಿಭಾಗದಲ್ಲಿ ಗುರುರಾಜ್ ಭಟ್ 3 ಕಿ.ಮೀ ಓಟದಲ್ಲಿ ಬೆಳ್ಳಿ ಪದಕ ಗಳಿಸಿರುವರು. ಡಾ.ಎನ್.ಎಸ್.ಎ.ಎಂ. ಇಂಗ್ಲೀಷ್ ಮಾಧ್ಯಮ ಶಾಲೆಯ ರಕ್ಷತ್, ರಿಷಭ್ ಮತ್ತು ಭವಿಶ್ 3 ಕಿ.ಮೀ ಬಾಲಕರ ವಿಭಾಗದಲ್ಲಿ ಚಿನ್ನದ ಪದಕ, ಕಂಚಿನ ಪದಕ ಹಾಗೂ 5ನೇ ಸ್ಥಾನ ತಮ್ಮದಾಗಿಸಿಕೊಂಡಿರುವರು. ಡಾ.ಎನ್.ಎಸ್.ಎ.ಎಂ. ಇಂಗ್ಲೀಷ್ ಮಾಧ್ಯಮ ಶಾಲೆಯ ಸ್ತುತಿ ಮತ್ತು ಅದಿತಿ ಕಂಚಿನ ಪದಕ ಮತ್ತು ನಾಲ್ಕನೇ ಸ್ಥಾನ ಪಡೆದರು ಎಂದು ನಿಟ್ಟೆ ಕಾಲೇಜಿನ ಪತ್ರಿಕಾ ಪ್ರಕಟಣೆಯು ತಿಳಿಸಿದೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top