ಆಳ್ವಾಸ್ ಕಾಲೇಜಿನಲ್ಲಿ ಚಿಗುರು ವಿದ್ಯಾರ್ಥಿ ವೇದಿಕೆಯಿಂದ ‘ಯೋಧ ನಮನ’
ವಿದ್ಯಾಗಿರಿ : ಸೈನಿಕ ಸವೆಸುವ ಜೀವನ, ನಾವೆಲ್ಲಾ ಸಾಧಿಸಿ ನಡೆಸುವ ಉತ್ಕøಷ್ಟ ಜೀವನಕ್ಕಿಂತಲೂ ಶ್ರೇಷ್ಠವಾದುದು ಹಾಗೂ ಅನುಕರಣೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಆಳ್ವಾಸ್ ಕಾಲೇಜು ಚಿಗುರು ವಿದ್ಯಾರ್ಥಿ ವೇದಿಕೆ ಶುಕ್ರವಾರ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಯೋಧ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧಿಸಬೇಕು ಎಂಬ ಛಲ ಪ್ರತಿಯೊಬ್ಬರಲ್ಲಿ ಇರಬೇಕು. ಎಲ್ಲರಲ್ಲೂ ಗುರಿ ಸಾಧಿಸುವ ಛಲ ಇದ್ದಾಗ ದೇಶ ಯಶಸ್ಸು ಕಾಣಲು ಸಾಧ್ಯ. ಉತ್ಸಾಹ ಇದ್ದಾಗ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಗುರಿ ಸಾಧಿಸುವ ನಿಟ್ಟಿನಲ್ಲಿ ಛಲ ಮುಖ್ಯ. ಇದನ್ನು ನಾವು ಯೋಧರಲ್ಲಿ ಕಾಣಬಹುದು. ಅಂತಹ ಶಿಸ್ತುಬದ್ಧ ಬದುಕು ರೂಢಿಸಿಕೊಳ್ಳಬೇಕು ಎಂದರು.
ಈ ದೇಶದ ಪ್ರತಿಯೊಬ್ಬ ಪ್ರಜೆಯು ಹಗ್ಗ ಜಗ್ಗಾಟದಲ್ಲಿರುವ ಎರಡು ಗುಂಪುಗಳಂತೆ ವಿರುದ್ಧ ದಿಕ್ಕಿನಲ್ಲಿ ಹಗ್ಗವನ್ನು ಜಗ್ಗದೆ, ರಥವನ್ನು ಎಲ್ಲರೂ ಸೇರಿ ಭಕ್ತಿಯಿಂದ ಒಂದೆಡೆಗೆ ಒಯ್ಯುವಂತೆ, ನಮ್ಮ ಮನಸ್ಥಿತಿ ಹೊಂದಿರಬೇಕು ಎಂದರು . ನಾವೆಲ್ಲ ಜೊತೆಯಾಗಿ ಒಂದೆ ಮನಸ್ಸಿನಿಂದ, ಒಂದೆ ಗುರಿಯೆಡೆಗೆ ನೆಡೆದರೆ ಯಶಸ್ಸು ಸಾಧ್ಯ. ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಮನೆಮಾಡಿರಬೇಕು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರ ಅಪಾರವಾಗಿದೆ. ಅದೇ ಮಾದರಿಯಲ್ಲಿ ನಾವು ಸಾಮಾಜಿಕ ಯೋಧರಾಗಬೇಕು. ಕೊಡುಗೆ ನೀಡಬೇಕು’ ಎಂದರು.
ಚಿಗುರು ವಿದ್ಯಾರ್ಥಿ ವೇದಿಕೆಯ ಸಂಯೋಜಕ ಶಶಾಂಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ನಿರೂಪಿಸಿ, ಕೃತಿಕ್ಷಾ ಸ್ವಾಗತಿಸಿ, ಯೋಗೀಶ್ ಅತಿಥಿಯನ್ನು ಪರಿಚಯಿಸಿ, ವೈಭವ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ