ಹಾಸನದ ಸಂಸ್ಕೃತ ಭವನದಲ್ಲಿ 24 ಕಲಾವಿದರ ಸಮೂಹ ಚಿತ್ರ ಕಲಾ ಪ್ರದರ್ಶನ

Upayuktha
0



ಹಾಸನ: ಶಾಂತಲಾ ಚಿತ್ರಕಲಾ ವಿದ್ಯಾಲಯ ವತಿಯಿಂದ ಹಾಸನದ ಸಂಸ್ಕೃತ ಭವನದಲ್ಲಿ  ಶಾಂತಲಾ ಆರ್ಟ್ ಸಮೂಹ ಚಿತ್ರ ಕಲಾಪ್ರದರ್ಶನ ಭಾನುವಾರ,  ಸೋಮವಾರ  ಎರಡು ದಿನಗಳು ಕಲಾವಿದರಿಂದ ಸಮೂಹ ಕಲಾ ಪ್ರದರ್ಶನ ನಡೆದಿದೆ. ಪ್ರದರ್ಶನದಲ್ಲಿ  24 ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಭಾಗವಹಿಸಿದರು. 



ಬಸವರಾಜ ಸಿ.ಎಸ್. ಕೆ.ಜೆ.ಶಿವಶಂಕರ್, ಶಿವಕುಮಾರ್ ಆರ್. ಲತಾ ಎಲ್.ಜಿ. ನಂದಿನಿ, ಚಂದ್ರಶೇಖರ್ ನಾಯರ್, ಯೋಗಾನಂದ ಹೆಚ್.ಎನ್. ನಿಜಾಮುದ್ಧಿನ್, ಮಂಜುಳ, ವಿಮಲ, ಶೋಭಾ ಸಿ.ಎನ್. ಲಕ್ಷ್ಮಿ. ಹೇಮಲತಾ, ಪ್ರೇಮ, ಅಸ್ಮತಾರಾ, ಬಬಿತ ಸಿ.ಎಸ್. ಕಿರಣ್ ಟಿ.ಆರ್. ಸೌಮ್ಯ ಎಸ್., ಪುನಿತ್ ನಾಯ್ಕ್, ಟಿ.ಎಂ. ವೃತ್ತಿಕಾ, ರಂಜಿತಾ ಹೆಚ್.ಯು, ಕೋಮಲ ಜೈನ್, ಅಕ್ಷತಾ ಯು.ಎಂ ಮತ್ತು ಭವಾನಿಯವರ ಕಲಾಕೃತಿಗಳು ಕಲಾಸಕ್ತರ ಮನ ಸೆಳೆದಿವೆ. 



ಇದೇ ಸಂದರ್ಭ ಭಾನುವಾರ ಬೆಳಿಗ್ಗೆ ಮಕ್ಕಳಿಗಾಗಿ ಚಿತ್ರಕಲಾ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ನೂರಾರು ಮಕ್ಕಳು ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಸಿದ್ಧ ಕಲಾವಿದರಾದ ಕೆ.ಟಿ.ಶಿವಪ್ರಸಾದ್, ಸಾಹಿತಿ ಗೊರೂರು ಅನಂತರಾಜು, ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೇಂಟಿಂಗ್ಸ್ ಗಳನ್ನು ವೀಕ್ಷಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವು ಸೋಮವಾರ ಬೆ.10ಕ್ಕೆ ನಡೆಯುವುದು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

                        


إرسال تعليق

0 تعليقات
إرسال تعليق (0)
To Top