ಮಗುವಿನ ಕಲಿಕೆ ನಿತ್ಯ ಜೀವನಕ್ಕೆ ಅನ್ವಯವಾಗಬೇಕು: ಕೆ. ಶಾರದ

Upayuktha
0

ಹಾಸನ: ಶಾಲೆಯಲ್ಲಿ ಪ್ರತೀ ಮಗುವೂ ಕಲಿಯುವಂತೆ ಶಿಕ್ಷಕರು ಗಮನ ಹರಿಸಬೇಕು. ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಶಾಲೆಯಲ್ಲಿ ತಾವು ಕಲಿತ ವಿಷಯವನ್ನು ತಮ್ಮ ನಿತ್ಯ ಜೀವನದಲ್ಲಿ ಅನ್ವಯಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಹಾಸನ ಡಯಟ್‌ನ ಉಪನ್ಯಾಸಕರು ಮತ್ತು ತರಬೇತಿಯ ಸಂಚಾಲಕರಾದ ಕೆ. ಶಾರದ ರವರು ಹೇಳಿದರು. 


ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಹಾಸನ ಇಲ್ಲಿ ಅರಕಲಗೂಡು ಮತ್ತು ಬೇಲೂರು ತಾಲ್ಲೂಕುಗಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜನೆಗೊಂಡಿದ್ದ ಓರಿಯಂಟೇಷನ್ ಆನ್ ಡಿಫರೆಂಟ್ ಅಸ್ಸೆಸ್ಮೆಂಟ್ಸ್, ಸರ್ವೆಸ್, ಅಂಡ್ ದೇಯರ್ ಇಂಪ್ಲಿಕೇಶನ್ಸ್ ಎಂಬ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಿ.ಆರ್. ಪಿ ಮತ್ತು ಬಿ.ಆರ್.ಪಿ.ಯವರು ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಾಗಿರುವುದರಿಂದ ಕ್ಲಸ್ಟರ್ ಮತ್ತು ಬ್ಲಾಕ್ ಹಂತದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸಿ.ಎಸ್.ಎ.ಎಸ್. ಪರೀಕ್ಷೆ ಎನ್.ಎ.ಎಸ್- 2021. ಪರೀಕ್ಷೆಗಳು ಕಲಿಕಾ ಸಾಮರ್ಥ್ಯ ಆಧಾರಿತವಾಗಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಯಾವ ಮಗು ಕಲಿಕಾ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ವಿಫಲವಾಗುವುದೋ ಆ ಸಾಮರ್ಥ್ಯಗಳನ್ನು ಪುನಃ ಕಲಿಸುವ ಮೂಲಕ ಕಲಿಕಾ ಫಲಗಳನ್ನು ಸಾಧಿಸಬೇಕು. ಈ ಹಿನ್ನಲೆಯಲ್ಲಿ ಸಿ ಆರ್.ಪಿ ಮತ್ತೆ ಬಿ.ಆರ್.ಪಿ ಯವರು ಸೂಕ್ತ ರೀತಿಯಲ್ಲಿ ಅನುಷ್ಠಾನ ಮಾಡುವುದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.


ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಗರದ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಆ್ಯನ್ಯುಯಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್- 2022 ಮತ್ತು ರಾಷ್ಟೀಯ ಸಾಧನಾ ಸಮೀಕ್ಷೆ- 2021 ರ ವರದಿಗಳನ್ನು ಪ್ರಸ್ತುತ ಪಡಿಸಿದರು. ಮಕ್ಕಳು ಯಾವ ಯಾವ ಕಲಿಕಾ ಸಾಮರ್ಥ್ಯಗಳಲ್ಲಿ ಶೇಕಡಾವಾರು ಫಲಿತಾಂಶ ಸಾಧಿಸಿದ್ದಾರೆ. ಶೇಕಡಾ ನೂರರಷ್ಟು ಸಾಧನೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.


ಶಿಕ್ಷಣ ಸಂಯೋಜಕ ರಾದ ಎಂ.ಆರ್.ಪ್ರಸನ್ನಕುಮಾರ್ ರವರು ತಮ್ಮ ತರಗತಿಯಲ್ಲಿ ಫೌಂಡೇಷನಲ್ ಲರ್ನಿಂಗ್ ಸ್ಟಡಿ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜರಾವ್ ರವರು ಸಿಎಸ್ಎಎಸ್ ಪರೀಕ್ಷೆಯಲ್ಲಿ ಮಕ್ಕಳು ಸಾಧಿಸಿರುವ ಪ್ರಗತಿಯ ವರದಿಯನ್ನು ಪ್ರಸ್ತುತ ಪಡಿಸಿದರು. ಅರಕಲಗೂಡು ಮತ್ತು ಬೇಲೂರು ತಾಲ್ಲೂಕುಗಳು ಸಿಆರ್ ಪಿ ಮತ್ತು ಬಿ.ಆರ್.ಪಿ ಯವರು ಶಿಬಿರಾರ್ಥಿಗಳಾಗಿ ಹಾರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top