ಪುತ್ತೂರು: ಚಿಟ್ಟಗಿತ್ತಳೆ ಎಂಬ ಕಾಡುಕಿತ್ತಳೆಯ ತಳಿ ಸಾಕಷ್ಟು ಸುಪರಿಚಿತವಾದರೂ ಅಳಿವಿನ ಅಂಚಿನಲ್ಲಿದೆ.
ಈ ವಾಸ್ತವ ಮನಗಂಡು ಮೂಡಿಗೆರೆ ಕೇವೀಕೆಯ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಎ.ಟಿ.ಅವರು ತಮ್ಮ ಕೇಂದ್ರದಲ್ಲಿ ಚಿಟ್ಟಗಿತ್ತಳೆ ತಳಿ ಸಂಗ್ರಹಾಲಯ ಆರಂಭಿಸಿ ಕಾಲಕ್ರಮೇಣ ಉತ್ತಮ ಚಿಟ್ಟಗಿತ್ತಳೆ ಕಸಿ ಗಿಡಗಳನ್ನು ಆಸಕ್ತರಿಗೆ ಪೂರೈಸುವ ಉದ್ದೇಶ ಹೊಂದಿದ್ದಾರೆ.
ತಮ್ಮಲ್ಲಿ ಒಳ್ಳೆಯ ಸಿಹಿ ರುಚಿಯ, ನೇರ ತಿನ್ನಬಹುದಾದ ಪ್ರತಿ ವರ್ಷ ಚೆನ್ನಾಗಿ ಇಳುವರಿ ಕೊಡುವ, ಒಳ್ಳೆಯ ಗಾತ್ರದ ಚಿಟ್ಟಗಿತ್ತಳೆ ಮರಗಳಿರುವ ಕೃಷಿಕರು ತಮಗೆ ಈ ಬಗ್ಗೆ ಕೆಳಗಿನ ನಂಬರಿಗೆ ವಾಟ್ಸಪ್ ಮೂಲಕ- +91 86602 22357- ಈ ಸಂಖ್ಯೆಗೆ ಮಾಹಿತಿ ಮತ್ತು ಪಟ ಒದಗಿಸಬೇಕೆಂದು ಅವರು ಕೋರಿದ್ದಾರೆ.
ಸುದ್ದಿ-ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ