ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಪಂಚಭೂತಗಳಲ್ಲಿ ಲೀನ

Upayuktha
0


ಮೂಡುಬಿದಿರೆ: ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಅಂತ್ಯಕ್ರಿಯೆಯು ಮಿಜಾರಿನ ಸ್ವಗೃಹದ ವಠಾರದಲ್ಲಿ ಬುಧವಾರ ನಡೆಯಿತು. ಬೆಳಿಗ್ಗೆ 9.30ರಿಂದ 11.45 ತನಕ  ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.  ಬಂಟ ಸಮುದಾಯದ ಸಕಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಸ್ವಗೃಹದ ತೋಟದಲ್ಲಿ ಪುತ್ರರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 

 

ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೇಮಾರು ಈಶ ವಿಠ್ಠಲದಾಸ ಸ್ವಾಮೀಜಿ ಸಂತಾಪ ವ್ಯಕ್ತ ಪಡಿಸಿದರು.  ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ‍್ಯವರ‍್ಯ ಸ್ವಾಮೀಜಿ, ಧರ್ಮಗುರುಗಳಾದ ರೆ. ಫಾದರ್ ಗೋಮ್ಸ್, ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಂಸದ ನಳಿನಿ ಕುಮಾರ್ ಕಟೀಲ್, ಮೂಡುಬಿದಿರೆ ಶಾಸಕ ಉಮಾನಾಥ್ ಎ ಕೋಟ್ಯಾನ್, ಮಾಜಿ ಸಚಿವರುಗಳಾದ ಕೆ ಅಭಯಚಂದ್ರ ಜೈನ್,   ಬಿ. ರಮಾನಾಥ್ ರೈ,  ವಿನಯ್ ಕುಮಾರ್ ಸೊರಕೆ, ಬಿ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿಸೋಜಾ, ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಮ್,  ಜಯಶ್ರೀ ಅಮರನಾಥ್ ಶೆಟ್ಟಿ, ನಿಟ್ಟೆ ಸಮೂಹ ಸಂಸ್ಥೆಗಳ ಎನ್. ವಿನಯ ಹೆಗ್ಡೆ, ಉದ್ಯಮಿ ಶ್ರೀಪತಿ ಭಟ್,  ಶಶಿಧರ್ ಶೆಟ್ಟಿ ಬರೋಡಾ,   ಎಂ. ಆರ್ ಅರವಿಂದ ಪೂಂಜಾ,  ಶಕ್ತಿ ಕಾಲೇಜಿನ ಕೆಸಿ ನಾಯಕ್,   ಜಾಗತಿಕ ಬಂಟ್ಸ್ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ದೇವದಾಸ್ ಕಾಪಿಕಾಡ್,  ಕಟೀಲ್ ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಪಳ್ಳಿ ಕಿಶಾನ್ ಹೆಗ್ಡೆ,  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವರು ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಮಿಜಾರು ತೋಡಾರಿನ ಸಕಲ ಧರ್ಮಗಳ ಗ್ರಾಮಸ್ಥರು,  ಊರ ಪರ ಊರ ಅಭಿಮಾನಿಗಳು, ಹಿರಿಯರು, ಆಳ್ವಾಸ್ ಸಂಸ್ಥೆಯ ಉದ್ಯೋಗಿಗಳು, ಅಪಾರ ಅಭಿಮಾನಿಗಳು  ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದರು.


ಸಂತಾಪ ಸೂಚಕದ ಹಿನ್ನಲೆಯಲ್ಲಿ ಮಿಜಾರು ತೋಡಾರಿನ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಅರ್ಧದಿನದವರೆಗೆ ಮುಚ್ಚಿದ್ದವು.  ನವೆಂಬರ್ 13ರಂದು ಮೂಡುಬಿದಿರೆಯ ವಿದ್ಯಾಗಿರಿ ಕೃಷಿಸಿರಿ ವೇದಿಕೆಯಲ್ಲಿ ಮೃತರ ಆತ್ಮ ಸದ್ಗತಿಗಾಗಿ ಉತ್ತರ ಕ್ರಿಯೆಯ ಕಾರ್ಯಕ್ರಮಗಳು ಜರಗುಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top