ಮಂಗಳೂರು ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರ

Upayuktha
0



ಮಂಗಳೂರು: ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ನವೆಂಬರ್ ತಿಂಗಳ ಯೋಗ ಶಿಬಿರ ಪ್ರಾರಂಭವಾಗಿದ್ದು, ಯೋಗ ಶಿಬಿರ ಸಂಜೆ 5 ರಿಂದ 6.30 ರ ವರೆಗೆ ನಡೆಯುತ್ತದೆ.



ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು. ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಯೋಗ ಚಕ್ರಗಳ ವರ್ಣ ಚಿಕಿತ್ಸೆ ಮಾಹಿತಿ, ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. 



ಯೋಗದ ಮೂಲಕ ಕಾಯಿಲೆಗಳ ನಿಯಂತ್ರಣದ ಬಗ್ಗೆ ತಿಳುವಳಿಕೆ ಮೂಡಿಸುವುದು. ಶಾಂತಿ ನೆಮ್ಮದಿ ಅಭಿವೃದ್ಧಿಯನ್ನು ಯೋಗದ ಮೂಲಕ ಪಡೆಯುವ ಬಗ್ಗೆ ತಿಳುವಳಿಕೆ ನೀಡಲಾಗುವುದು. ಒತ್ತಡ ನಿವಾರಣೆ, ದೈಹಿಕ ಮಾನಸಿಕ ಕಾಯಿಲೆಗಳು ಯೋಗದ ಮೂಲಕ ನಿಯಂತ್ರಣ, ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ, ದೈಹಿಕ ಆರೋಗ್ಯ ಚಿತ್ತ ಶಾಂತಿಗೆ ಯೋಗ ಸಹಕಾರಿ ಎಂಬ ಮಾಹಿತಿಗಳನ್ನು ನೀಡಲಾಗುವುದು.



ಆಸಕ್ತರು ಸಂಜೆ 5.ರಿಂದ ನಡೆಸುವ ರಾಮಕೃಷ್ಣ ಮಠದ ಯೋಗ ಹಾಲ್‌ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಿರಿ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
To Top