ಯೋಗ: ಫಿಲೋಮಿನಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Upayuktha
0

 

ಪುತ್ತೂರು: ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ವತಿಯಿಂದ ಮೈಸೂರಿನಲ್ಲಿ 29/11/2023 ರಂದು ನಡೆದ '4ನೇ ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2023' ಇದರಲ್ಲಿ 14 ರಿಂದ 18ರ ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ನಿಖಿಲ್ ಬಿ.ಕೆ. ಇವರು ಟ್ರೆಡಿಶನಲ್ ವಿಭಾಗದಲ್ಲಿ ಹಾಗೂ ಆರ್ಟಿಸ್ಟಿಕ್ಸ್ ಸಿಂಗಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.


ಇವರು ನರಿಮೊಗರು ನಿವಾಸಿ ಬಾಲಚಂದ್ರ ಕೆ ಹಾಗೂ ಪ್ರಮೀಳ ಜಿ ದಂಪತಿಗಳ ಪುತ್ರನಾಗಿದ್ದು, ಬೆಳ್ಳಾರೆಯ ನವೀನ್ ಕುಮಾರ್ ತರಬೇತಿಯನ್ನು ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
To Top