ಮಹಿಳೆಯರಿಗೆ ಸ್ವಯಂ ರಕ್ಷಣಾ ಕಲೆ ಅಗತ್ಯ: ಕಾರ್ತಿಕ್ ಎಸ್

Upayuktha
0



ಸುರತ್ಕಲ್: ಪ್ರಸ್ತುತ ಕಾಲದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ವಿದ್ಯಾರ್ಥಿನಿಯರು ಸ್ವಯಂ ರಕ್ಷಣಾ ಕಲೆಗಳನ್ನು ಅಭ್ಯಾಸಿಸಿದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬಹುದು ಎಂದು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ (ರಿ) ಕಟೀಲು ಇದರ ಸಂಸ್ಥಾಪಕ ಕಾರ್ತಿಕ್ ಎಸ್ ಕಟೀಲು ನುಡಿದರು. 



ಅವರು  ಸುರತ್ಕಲ್ ಗೋವಿಂದ ದಾಸ ಕಾಲೇಜಿನ  ಮಹಿಳಾ ವೇದಿಕೆ ಮತ್ತು ಗ್ರಾಹಕ ಸಂಘ ಮತ್ತು ಸುರತ್ಕಲ್ ಇನ್ನರ್ ವೀಲ್ ಕ್ಲಬ್‍ಗಳ ಜಂಟಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿನಿಯರಿಗಾಗಿ ಸ್ವಯಂ ರಕ್ಷಣಾ ಕಲೆಗಳ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.



ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ  ಕಾರ್ತಿಕ್ ಕಟೀಲ್ ಅವರ ಸ್ವರಕ್ಷ ತಂತ್ರದ ಮೂಲಕ ಅನೇಕ ಯುವತಿಯರು ಸ್ವಯಂ ರಕ್ಷಣೆ ಮಾಡಿಕೊಂಡಿದ್ದಾರೆಂದು ಶ್ಲಾಘಿಸಿದರು.



ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷೆ ಸಾವಿತ್ರ ರಮೇಶ್ ಭಟ್ ವಿದ್ಯಾರ್ಥಿನಿಯರು ಸ್ವಯಂ ರಕ್ಷಣಾ ಕಲೆಗಳನ್ನು ಅಭ್ಯಾಸಿಸಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕೆಂದರು. ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ ಶುಭ ಹಾರೈಸಿದರು. ಕಾರ್ತಿಕ್ ಕಟೀಲ್ ಮತ್ತು ಶೋಭಲತಾ ಸುರೇಶ್ ಸ್ವಯಂ ರಕ್ಷಣಾ ಕಲೆಗಳ ಪ್ರಾತ್ಯಕ್ಷಿಕೆ ನೀಡಿದರು.



ಉಪ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ಹರೀಶ ಆಚಾರ್ಯ ಪಿ., ಮಹಿಳಾ ವೇದಿಕಯ ಸಂಯೋಜಕಿ ಶ್ರೀದೇವಿ, ಗ್ರಾಹಕರ ವೇದಿಕೆಯ ಸಂಯೋಜಕಿ ದಯಾ ಸುವರ್ಣ, ಉಪನ್ಯಾಸಕಿಯರಾದ ಡಾ. ವಿಜಯಲಕ್ಷ್ಮಿ, ಅಕ್ಷತಾ ವಿ, ಇನ್ನರ್‍ವೀಲ್ ಕ್ಲಬ್‍ನ ಕಾರ್ಯದರ್ಶಿ ಮಾಲತಿ ಸಚ್ಚಿದಾನಂದ, ಸುನಿತಾ ಗುರುರಾಜ್, ಶೈಲಾ ಮೋಹನ್ ಉಪಸ್ಥಿತರಿದ್ದರು. ರಿಯಾ ಸ್ವಾಗತಿಸಿ ವಂದಿಸಿದರು. ಪೂರ್ವಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 






Post a Comment

0 Comments
Post a Comment (0)
To Top