ಬಹುಸಂಖ್ಯಾತರ ಮತ್ತು ಅಲ್ಪ ಸಂಖ್ಯಾತರ ಒಗ್ಗಟ್ಟೇ ದೇಶದ ಐಕ್ಯತೆಯ ಮೂಲ: ಜಯಪ್ರಕಾಶ್ ಶೆಟ್ಟಿ ಹೆಚ್

Upayuktha
0



ಉಡುಪಿ: ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ “ಅಲ್ಪ ಸಂಖ್ಯಾತರು, ಭಾವೈಕ್ಯತೆ ಮತ್ತು ಅಭಿವೃದ್ಧಿ” ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  




ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್. ರವರು, “ಒಂದು ದೇಶದ ಸರ್ವಾಂಗೀಣ ಬೆಳವಣಿಗೆಗೆ ದೇಶದ ಸಮಸ್ತ ನಾಗರಿಕರು ಕೂಡಿ ಬಾಳುವಿಕೆ ಅತ್ಯಂತ ಅಗತ್ಯ”.  ಅಲ್ಪ ಸಂಖ್ಯಾತರ ಆಶಯ ಮತ್ತು ಅಸಹಾಯಕತೆಗಳನ್ನು ಬಹು ಸಂಖ್ಯಾತರು ರಕ್ಷಿಸಬೇಕು ಮತ್ತು ಗೌರವಿಸಬೇಕು. ಹಾಗಾದಾಗ ಮಾತ್ರ ಒಂದು ರಾಷ್ಟ್ರ ಬಲಿಷ್ಟವಾಗಿ ಬೆಳೆಯುತ್ತದೆ” ಎಂದರು.  





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಇವರು ಈ ಸಪ್ತಾಹದ ಮುಖ್ಯ ಉದ್ದೇಶ ಮತ್ತು ಭಾಷೆ, ಪ್ರದೇಶ ಹಾಗೂ ಇತರ ರಾಜಕೀಯ, ಆರ್ಥಿಕ ಕುಂದು ಕೊರತೆಗಳನ್ನು ಶಾಂತಿಯುತವಾಗಿ ಮತ್ತು ಸಂವಿಧಾನಾತ್ಮಕವಾಗಿ ಬಗೆಹರಿಸಿಕೊಳ್ಳುವ ಜಾಗೃತಿ ಮೂಡಿಸುವುದು’ ಎಂದರು.  ಡಾ. ಪ್ರಸಾದ್ ರಾವ್ ಎಂ. ಕಾರ್ಯಕ್ರಮ ಆಯೋಜಿಸಿ, ನಿರೂಪಿಸಿ ವಂದಿಸಿದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top